ಸ್ನಾನಕ್ಕೆಂದು ನದಿಗಿಳಿದಿದ್ದ ವೇಳೆ ಆಯ ತಪ್ಪಿ ಮುಳುಗಡೆ ➤ ಪಿಯುಸಿ ವಿದ್ಯಾರ್ಥಿಗಳಿಬ್ಬರು ಮೃತ್ಯು



(ನ್ಯೂಸ್ ಕಡಬ) newskadaba.com ಸಿದ್ದಾಪುರ, ಮಾ.31. ಸ್ನಾನಕ್ಕೆಂದು ನೀರಿಗಿಳಿದ ವಿದ್ಯಾರ್ಥಿಗಳಿಬ್ಬರು ನೀರಲ್ಲಿ ಮೃತಪಟ್ಟ ಘಟನೆ ವಾರಾಹಿ ಹೊಳೆಯಲ್ಲಿ ಗುರುವಾರದಂದು ನಡೆದಿದೆ.







ಮೃತ ವಿದ್ಯಾರ್ಥಿಗಳನ್ನು ಸಿದ್ಧಾಪುರ ತಾಲೂಕಿನ ಉಳ್ಳೂರು ಗ್ರಾಮದ ಮೋಹನ್‌ ಎಂಬವರ ಪುತ್ರ ಗಣೇಶ್(17) ಹಾಗೂ ಹಾಡಿ ದೇವಸ್ಥಾನದ ಮಂಜುನಾಥ ಮಡಿವಾಳ ಎಂಬವರ ಪುತ್ರ ಸುಮಂತ್‌ (17) ಎಂದು ಗುರುತಿಸಲಾಗಿದೆ. ಶಂಕರನಾರಾಯಣ ಸರಕಾರಿ ಪ್ರಥಮ ಕಾಲೇಜಿನ ಪ್ರಥಮ ಪಿಯುಸಿಯ ವಿದ್ಯಾರ್ಥಿಗಳಾಗಿದ್ದ ಮೃತರು, ಗುರುವಾರದಂದು ತನ್ನ ಸ್ನೇಹಿತರೊಂದಿಗೆ ವಾರಾಹಿ ಹೊಳೆಯ ಬಳಿ ಸ್ನಾನಕ್ಕೆ ಇಳಿಯುವಾಗ ಆಕಸ್ಮಿಕವಾಗಿ ನದಿಗೆ ಬಿದ್ದು ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ತಕ್ಷಣವೇ ಸ್ನೇಹಿತರು ಇಬ್ಬರನ್ನು ರಕ್ಷಿಸಲು ಪ್ರಯತ್ನಿಸಿದರಾದರೂ ಅದಾಗಲೇ ಇಬ್ಬರ ಪ್ರಾಣ ಪಕ್ಷಿ ಹಾರಿ ಹೋಗಿತ್ತು‌.






 

 

 

error: Content is protected !!
Scroll to Top