ನೆಲ್ಯಾಡಿ: ಸರಣಿ ಕಳ್ಳತನ ಪ್ರಕರಣದ ಆರೋಪಿ ಕೊನೆಗೂ ಅಂದರ್..

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಮಾ. 16. ನವೆಂಬರ್ ತಿಂಗಳಲ್ಲಿ ನೆಲ್ಯಾಡಿ ಭಾಗದಲ್ಲಿ ನಡೆದ ಸರಣಿ ಕಳ್ಳತನ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಉಪ್ಪಿನಂಗಡಿ ಪೊಲೀಸರು ಯಶಸ್ವಿಯಾಗಿದ್ದಾರೆ.

 

ಬಂಧಿತ ಆರೋಪಿಯನ್ನು ಹಾವೇರಿ ನಿವಾಸಿ ಈರಣ್ಣ ಎಂದು ಗುರುತಿಸಲಾಗಿದೆ. ಈತ 2021ರ ನ. 09ರಂದು ನೆಲ್ಯಾಡಿ ಪೇಟೆಯಲ್ಲಿರುವ ಮಂಜುನಾಥ ತರಕಾರಿ ಅಂಗಡಿ, ಸಾಯಿ ಮೆಡಿಕಲ್, ಸಾಯಿ ಬೇಕರಿ, ಆದರ್ಶ ಫ್ಯಾನ್ಸಿ, ಸೀಗಲ್ ಅಡಿಕೆ ಅಂಗಡಿ, ಸುರಕ್ಷಾ ಫ್ಯಾನ್ಸಿ, ಟಿಂಕು ಸ್ಟೋರ್ ಹಾಗೂ ಅರುಣ್ ಸ್ವೀಟ್ಸ್ ಮೊದಲಾದ ಅಂಗಡಿಗಳಿಂದ ಸರಣಿ ಕಳ್ಳತನ ನಡೆದಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡ ಪೊಲೀಸರು ಆರೋಪಿ ಹಾವೇರಿ ನಿವಾಸಿ ಈರಣ್ಣ ಎಂಬಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೂ ಅಲ್ಲದೇ ಆತ ಇತರ ಕಳ್ಳತನ ಪ್ರಕರಣದ ಆರೋಪಿಯೂ ಆಗಿದ್ದು ನೆಲ್ಯಾಡಿಯಲ್ಲಿ ಸರಣಿ ಕಳ್ಳತನ ಮಾಡಿರುವುದನ್ನು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

Also Read  ದೇರಳಕಟ್ಟೆ: ಪ್ರತಿಭಟನೆಗೆ ಬಳಸಿದ ಕುರ್ಚಿ ತುಂಬಿದ ಲಾರಿಗೆ ಬೆಂಕಿ ಹಚ್ಚಿದ ಕೀಡಿಗೇಡಿಗಳು?

 

error: Content is protected !!
Scroll to Top