ಸುಬ್ರಹ್ಮಣ್ಯ: ಕಾಡಾನೆ ದಾಳಿ..!!! ➤ ಯುವಕನ ಸ್ಥಿತಿ ಚಿಂತಾಜನಕ



(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಮಾ.13. ಕಾಡಾನೆಯೊಂದು ದಾಳಿ ನಡೆಸಿದ ಯುವಕನೋರ್ವ ಗಂಭೀರ ಗಾಯಗೊಂಡ ಘಟನೆ ಕೊಲ್ಲಮೊಗ್ರ ಎಂಬಲ್ಲಿ ಭಾನುವಾರದಂದು ಮುಂಜಾನೆ ನಡೆದಿದೆ.








ಗಾಯಗೊಂಡ ಯುವಕನನ್ನು ಕೋನಡ್ಕ ನಿವಾಸಿ ಗುರುಪ್ರಸಾದ್(21) ಎಂದು ಗುರುತಿಸಲಾಗಿದೆ. ಈತ ಎಂದಿನಂತೆ ಡೈರಿಗೆ ಹಾಲು ಹಾಕಲು ಬೈಕಿನಲ್ಲಿ ತೆರಳುತ್ತಿದ್ದ ವೇಳೆ ದಿಢೀರ್ ಪ್ರತ್ಯಕ್ಷಗೊಂಡ ಆನೆ ಅಡ್ಡ ಬಂದು ಯುವಕನ ಮೇಲೆ ದಾಳಿ ನಡೆಸಿದೆ. ಪರಿಣಾಮ ಬೈಕ್ ನಿಂದ ಕೆಳಗೆ ಬಿದ್ದಿದ್ದ ಯುವಕನನ್ನು ಆನೆಯು 50 ಮೀ ದೂರದವರೆಗೆ ಸೊಂಡಿಲಿನ ಸಹಾಯದಿಂದ ಎಳೆದುಕೊಂಡು ಹೋಗಿದೆ ಎನ್ನಲಾಗಿದೆ. ಈ ಸಂದರ್ಭ ಅಡಿಕೆ ಕೀಳಲು ಹೋಗುತ್ತಿದ್ದ ಕಾರ್ಮಿಕರೊಬ್ಬರು ದೂರದಿಂದ ನೋಡಿ ಜೋರಾಗಿ ಕಿರುಚಾಡಿದ್ದು ಈ ವೇಳೆ ಸ್ಥಳೀಯರು ಓಡಿ ಬಂದಿದ್ದು, ಈ ವೇಳೆ ಆನೆಯು ಯುವಕನನ್ನು ಬಿಟ್ಟು ಕಾಡಿನತ್ತ ಸಂಚರಿಸಿದೆ. ಸ್ಥಳೀಯರು ಗಾಯಾಳುವನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಿದ್ದು ಅವರ ಸ್ಥಿತಿ ಚಿಂತಜನಕವಾಗಿದೆ ಎಂದು ತಿಳಿದು ಬಂದಿದೆ.






 

error: Content is protected !!
Scroll to Top