Breaking News ರಷ್ಯಾ- ಉಕ್ರೇನ್ ನಡುವೆ ಸಮರ ➤ ರಷ್ಯಾ ದಾಳಿಗೆ ಕರ್ನಾಟಕ ಮೂಲದ ವಿದ್ಯಾರ್ಥಿ ಬಲಿ…!

(ನ್ಯೂಸ್ ಕಡಬ) newskadaba.com ಖಾರ್ಕಿವ್, ಮಾ. 01. ರಷ್ಯಾ-ಉಕ್ರೇನ್ ನಡುವಿನ ಸಮರದಲ್ಲಿ ರಷ್ಯಾದ ಶೆಲ್ ದಾಳಿಗೆ ಕರ್ನಾಟಕದ ವೈದ್ಯಕೀಯ ವಿದ್ಯಾರ್ಥಿ ಬಲಿಯಾಗಿದ್ದಾನೆ.

ಬಲಿಯಾದ ವ್ಯಕ್ತಿಯನ್ನು ಹಾವೇರಿಯ ಚಳಗೇರಿ ಗ್ರಾಮದ ನವೀನ್ ಎಂದು ಗುರುತಿಸಲಾಗಿದೆ. ಖಾರ್ಕಿವ್ ನಲ್ಲಿ ಐವರು ಸ್ನೇಹಿತರ ಜೊತೆಗಿದ್ದ ನವೀನ್, ಬೆಳಗ್ಗಿನ ತಿಂಡಿ ತರಲು ಹೊರಗಡೆ ಹೋಗಿದ್ದ ವೇಳೆ ರಷ್ಯಾದ ರಾಕೆಟ್ ದಾಳಿಗೆ ಬಲಿಯಾಗಿದ್ದಾನೆ ಎಂದು ವಿದೇಶಾಂಗ ಇಲಾಖೆ ಟ್ವೀಟ್ ಮಾಡಿದೆ. ಸದ್ಯ ಮೃತದೇಹವನ್ನು ಖಾರ್ಕಿವ್ ಶವಾಗಾರದಲ್ಲಿ ಇರಿಸಲಾಗಿದೆ.

Also Read  ➤ ಜೂಮ್‌ ಕಂಪೆನಿಯ ಅಧ್ಯಕ್ಷನ ವಜಾ!

error: Content is protected !!
Scroll to Top