ಬೆಳ್ಳಾರೆ: ಕಾರುಗಳ ನಡುವೆ ಮುಖಾಮುಖಿ ಢಿಕ್ಕಿ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಫೆ.27. ಕಾರುಗಳೆರಡು ಮುಖಾಮುಖಿ ಢಿಕ್ಕಿ ಹೊಡೆದ ಘಟನೆ ನಿಂತಿಕಲ್ಲು – ಬೆಳ್ಳಾರೆ ರಸ್ತೆಯ ಅಯ್ಯನಕಟ್ಟೆ ತಿರುವಿನಲ್ಲಿ ಭಾನುವಾರ ಸಂಜೆ ನಡೆದಿದೆ.

ಕಡಬದಿಂದ ಕಾಸರಗೋಡು ಕಡೆಗೆ ತೆರಳುತ್ತಿದ್ದ ಮಾರುತಿ ಸೆಲೆರಿಯೋ ಕಾರು ಹಾಗೂ ನಿಂತಿಕಲ್ಲು ಕಡೆಗೆ ತೆರಳುತ್ತಿದ್ದ ಹ್ಯುಂಡೈ ಐ20 ಕಾರು ನಡುವೆ ಅಯ್ಯನಕಟ್ಟೆ ಪಂಚಾಯತ್ ಸಭಾಂಗಣದ ಮುಂಭಾಗದ ತಿರುವಿನಲ್ಲಿ ಢಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಎರಡೂ ಕಾರಿನಲ್ಲಿದ್ದ ಪ್ರಯಾಣಿಕರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಬೆಳ್ಳಾರೆ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Also Read  ಉಚಿತ ಕಾನೂನು ತರಬೇತಿ

 

 

 

error: Content is protected !!
Scroll to Top