ಬೆಳ್ತಂಗಡಿ: ಕಿಡಿಗೇಡಿಗಳಿಂದ ಮಸೀದಿಗೆ ಬಿಯರ್ ಬಾಟಲಿ ಎಸೆದು ದುಷ್ಕೃತ್ಯ..!



(ನ್ಯೂಸ್ ಕಡಬ) newskadaba.com‌ಬೆಳ್ತಂಗಡಿ, ಫೆ. 24. ಇಲ್ಲಿಗೆ ಸಮೀಪದ ಮುರ ಎಂಬಲ್ಲಿನ ಮಸೀದಿಯೊಂದಕ್ಕೆ ದುಷ್ಕರ್ಮಿಗಳ ತಂಡವೊಂದು ಬಿಯರ್ ಬಾಟಲಿ ಎಸೆದು ದಾಂಧಲೆ ನಡೆಸಿದ ಘಟನೆ ಬುಧವಾರದಂದು ತಡರಾತ್ರಿ ನಡೆದಿದೆ.







ದುಷ್ಕರ್ಮಿಗಳು ನಡೆಸಿದ ದುಷ್ಕೃತ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಘಟನೆಯಿಂದಾಗಿ ಮಸೀದಿ ಮತ್ತು ಸ್ಥಳದಲ್ಲಿ ನಿಲ್ಲಿಸಲಾಗಿದ್ದ ಕಾರಿಗೆ ಹಾನಿಯಾಗಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪ್ರಕರಣ ದಾಖಲಿಸಿ, ತನಿಖೆ ಮುಂದುವರಿಸಿದ್ದಾರೆ.






 

error: Content is protected !!
Scroll to Top