ಟೂತ್ ಪೇಸ್ಟ್ ಎಂದು ತಪ್ಪಾಗಿ ತಿಳಿದು ಇಲಿ ಪಾಷಾಣದಲ್ಲಿ ಹಲ್ಲುಜ್ಜಿದ ಯುವತಿ..! ➤ ಚಿಕಿತ್ಸೆ ಫಲಿಸದೇ ಮೃತ್ಯು



(ನ್ಯೂಸ್ ಕಡಬ) newskadaba.com ಸುಳ್ಯ, ಫೆ. 22. ಹಲ್ಲುಜ್ಜುವ ಪೇಸ್ಟ್ ಎಂದು ತಿಳಿದು ಇಲಿ ಪಾಷಾಣದಲ್ಲಿ ಹಲ್ಲುಜ್ಜಿ ಅಸ್ವಸ್ಥಗೊಂಡು ವಾರದ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ವಿದ್ಯಾರ್ಥಿನಿಯು ಚಿಕಿತ್ಸೆ ಫಲಿಸದೇ ಮೃತಪಟ್ಟ ಘಟನೆ ಮೃತಪಟ್ಟ ಘಟನೆ ಸಂಭವಿಸಿದೆ.







ಮೃತ ವಿದ್ಯಾರ್ಥಿನಿಯನ್ನು ಮರ್ಕಂಜ ಗ್ರಾಮದ ಬೇರಿಕೆ ನಿವಾಸಿ ರಮೇಶ ಎಂಬವರ ಪುತ್ರಿ ಶ್ರಾವ್ಯಾ (17) ಎಂದು ಗುರುತಿಸಲಾಗಿದೆ. ಪುತ್ತೂರಿನ ಕಾಲೇಜೊಂದರಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಶ್ರಾವ್ಯಾ ವಾರದ ಹಿಂದೆ ಮನೆಯಲ್ಲಿ ಹಲ್ಲುಜ್ಜುವ ಟೂತ್‌ಪೇಸ್ಟ್‌ ಎಂದು ತಪ್ಪಾಗಿ ತಿಳಿದು ಇಲಿ ಪಾಷಾಣದಲ್ಲಿ ಹಲ್ಲುಜ್ಜಿದ್ದು, ಪರಿಣಾಮ ದೇಹದೊಳಗೆ ವಿಷ ಸೇರಿ ಅಸ್ವಸ್ಥಗೊಂಡಿದ್ದಳು. ತಕ್ಷಣವೇ ವಿಷಯ ತಿಳಿದ ಮನೆ ಮಂದಿ ಆಕೆಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಚಿಕಿತ್ಸೆ ಫ‌ಲಿಸದೆ ಆಕೆ ಮೃತಪಟ್ಟಿದ್ದಾಳೆ. ಈ ಕುರಿತು ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






error: Content is protected !!
Scroll to Top