ಎನ್ಐಟಿಕೆ ಟೋಲ್ ಗೇಟ್ ವಿರುದ್ದ ಧರಣಿ ನಿರತ ಸ್ಥಳಕ್ಕೆ ನುಗ್ಗಿ ಮಂಗಳಮುಖಿಯರಿಂದ ದಾಂಧಲೆ…! ➤ ಆರು ಮಂದಿಯ ಬಂಧನ

(ನ್ಯೂಸ್ ಕಡಬ) newskadaba.com ಸುರತ್ಕಲ್, ಫೆ. 16. ಎನ್ಐಟಿಕೆ ಟೋಲ್ ಗೇಟ್ ವಿರುದ್ದ ನಡೆಯುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಮಧ್ಯರಾತ್ರಿಯಲ್ಲಿ ಬಂದ ಮಂಗಳಮುಖಿಯರು ದಾಂಧಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿಯನ್ನು ಪೊಲೀಸರು ಬಂಧಿಸಿದ ಘಟನೆ ವರದಿಯಾಗಿದೆ.

ಬಂಧಿತರನ್ನು ಮಂಡ್ಯ ಮೂಲದ ವಾಸವಿ ಗೌಡ, ದಾವಣಗೆರೆ ಮೂಲದ ಲಿಪಿಕಾ, ಹಾಸನ ಮೂಲದ ಹಿಮಾ, ಮೈಸೂರು ಮೂಲದ ಆದ್ಯ, ಮಾಯಾ, ಹಾಗೂ ರಾಮನಗರ ಜಿಲ್ಲೆಯ ಮೈತ್ರಿ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳು ಟೋಲ್ ಗೇಟ್ ವಿರುದ್ದ ನಡೆಯುತ್ತಿದ್ದ ಪ್ರತಿಭಟನಾ ನಿರತ ಸ್ಥಳಕ್ಕೆ ನುಗ್ಗಿ ಅಸಭ್ಯವಾಗಿ ವರ್ತಿಸಿ, ಅವಾಚ್ಯ ಶಬ್ದಗಳಿಂದ ಬೈದು ಆಸಿಫ್ ಆಪತ್ಬಾಂಧವ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದರು.

Also Read  ಸೀಲ್‌ ಪರೀಕ್ಷೆ ಮಾಡದಿರುವುದೇ ಅನಿಲ ಅವಘಡಗಳಿಗೆ ಮೂಲ ಕಾರಣ     ➤ ಸಿಲಿಂಡರ್‌ ಪಡೆಯುವ ಮುನ್ನ ಸೀಲ್‌ ಪರೀಕ್ಷಿಸಿ

error: Content is protected !!
Scroll to Top