ಬಿಸಿ ಸಾಂಬಾರಿನ ಪಾತ್ರೆಗೆ ಬಿದ್ದು ಎರಡು ವರ್ಷದ ಕಂದಮ್ಮ ದುರ್ಮರಣ…!

(ನ್ಯೂಸ್ ಕಡಬ) newskadaba.com ವಿಜಯವಾಡ, ಫೆ. 15. ಬಿಸಿ ಸಾಂಬಾರಿನ ಪಾತ್ರೆಗೆ ಬಿದ್ದು ಎರಡು ವರ್ಷದ ಕಂದಮ್ಮ ಮೃತಪಟ್ಟ ದಾರುಣ ಘಟನೆ ಆಂದ್ರಪ್ರದೇಶದ ಕೃಷ್ಣಾ ಜಿಲ್ಲೆಯ ಕಲಗಾರ ಗ್ರಾಮದಲ್ಲಿ ನಡೆದಿದೆ.


ಮೃತ ಮಗುವನ್ನು ಕರುಮುಂಚಿ ಶಿವ, ಬನ್ನು ದಂಪತಿ ಪುತ್ರಿ ತೇಜಸ್ವಿನಿ ಎಂದು ಗುರುತಿಸಲಾಗಿದೆ. ಮಗುವಿನ ಹುಟ್ಡುಹಬ್ಬದ ಪ್ರಯುಕ್ತ ಮನೆಯಲ್ಲಿ ಬಗೆಬಗೆಯ ಭಕ್ಷ್ಯಗಳನ್ನು ಮಾಡಲಾಗಿತ್ತು. ಅತ್ತ ಮನೆಗೆ ಬಂದ ಅತಿಥಿಗಳನ್ನು ಪಾಲಕರು ಸತ್ಕರಿಸುತ್ತಿದ್ದರೆ, ಇತ್ತ ಮನೆಯ ಹೊರಗೆ ಆಟವಾಡುತ್ತಿದ್ದ ಮಗು ಅಡುಗೆ ಕೋಣೆಗೆ ತೆರಳಿ ಕುರ್ಚಿ ಹತ್ತಲು ಪ್ರಯತ್ನಿಸುತ್ತಿದ್ದ ವೇಳೆ ಆಯತಪ್ಪಿ ಆಗತಾನೇ ಕುದಿಸಿಡಲಾಗಿದ್ದ ಸಾಂಬಾರಿನ ಪಾತ್ರೆಗೆ ಬಿದ್ದಿದ್ದಾಳೆ. ಸುಟ್ಟಗಾಯಗಳಿಂದ ನರಳುತ್ತಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅದಾಗಲೇ ಮೃತಪಟ್ಟಿದ್ದಾಳೆ ಎನ್ನಲಾಗಿದೆ.

Also Read  ಖಜಾನೆ ಅಧಿಕಾರಿಯನ್ನೇ ಸುಲಿಗೆ ಮಾಡಿದ ಮಂಗಳಮುಖಿ ➤ ಒಂದೂವರೆ ಸಾವಿರ ರೂ. ಕಿತ್ತು ಪರಾರಿ

 

error: Content is protected !!
Scroll to Top