ಬಂಟ್ವಾಳ: ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ- ಆರೋಪಿ ಅಂದರ್…!

(ನ್ಯೂಸ್ ಕಡಬ) newskadaba.com ಬಂಟ್ವಾಳ, ಫೆ. 08. ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪದಕ್ಕೆ ಸಂಬಂಧಿಸಿ ಯುವಕನನ್ನು ಪೋಕ್ಸೋ ಕಾಯ್ದೆಯಡಿ ಬಂಟ್ವಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಫರಂಗಿಪೇಟೆ ಕುಂಪನಮಜಲು ನಿವಾಸಿ ಮುಸ್ತಫಾ (32) ಎಂದು ಗುರುತಿಸಲಾಗಿದೆ. ಈತ ನೆರೆ ಮನೆಯ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಫರಂಗಿಪೇಟೆಯ ಅಂಚೆ ಕಚೇರಿ ಬಳಿ ಕರೆದುಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಬಾಲಕಿಯ ಹೆತ್ತವರು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದರು. ಅದರಂತೆ ಆರೋಪಿಯನ್ನು‌ ಬಂಧಿಸಲಾಗಿದೆ.

Also Read  Breaking: ಕೃಷಿ ಕ್ಷೇತ್ರದ ಸಾಧನೆಗೆ ಕರಾವಳಿಗೆ ಒಲಿದ ದೇಶದ ಅತ್ಯುನ್ನತ ಗೌರವ 'ಪದ್ಮಶ್ರೀ ಪುರಸ್ಕಾರ' ➤ ಸುರಂಗ ಕೊರೆದು ನೀರು ಹರಿಸಿದ ವಿಟ್ಲದ ಮಹಾಲಿಂಗ ನಾಯ್ಕರಿಗೆ ಗೌರವ ಸಂದಾಯ

error: Content is protected !!
Scroll to Top