ಪುತ್ತೂರು ಎ.ಸಿ ಡಾ.ಯತೀಶ್ ಉಳ್ಳಾಲ್ ವರ್ಗಾವಣೆ ➤ ನೂತನ ಎಸಿ ಆಗಿ ಗಿರೀಶ್ ನಂದನ್ ನೇಮಕ

(ನ್ಯೂಸ್ ಕಡಬ) newskadaba.com ಪುತ್ತೂರು, ಫೆ. 03. ಪುತ್ತೂರು ಎ.ಸಿ ಆಗಿ ಕರ್ತವ್ಯದಲ್ಲಿದ್ದ ಡಾ.ಯತೀಶ್ ಉಳ್ಳಾಲ್ ಅವರನ್ನು ವರ್ಗಾವಣೆಗೊಳಿಸಿ, ನೂತನ ಎಸಿ ಆಗಿ ಹಾಸನ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಮುಖ್ಯ ಆಡಳಿತಾಧಿಕಾರಿಯಾಗಿ ಕರ್ತವ್ಯದಲ್ಲಿದ್ದ ಕೆಎಎಸ್ ಕಿರಿಯ ಶ್ರೇಣಿಯ ಅಧಿಕಾರಿ ಗಿರೀಶ್ ನಂದನ್ ಎಂ ಅವರನ್ನು ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ.


ಗಿರೀಶ್ ನಂದನ್ ಅವರು ಎತ್ತಿನ ಹೊಳೆ ಯೊಜನೆಯ ವಿಶೇಷ ಭೂಸ್ವಾಧೀನಾಧಿಕಾರಿಯಾಗಿಯೂ ಕರ್ತವ್ಯ ಸಲ್ಲಿಸಿದ್ದರು.

Scroll to Top