ಅರಂತೋಡು: “ಪ್ರತಿದಿನ ಸ್ವಚ್ಛತೆ ಕಡೆ ಹತ್ತು ಹೆಜ್ಜೆಗಳು” ಎಂಬ ಧ್ಯೇಯ ವಾಕ್ಯದೊಂದಿಗೆ ಹೆದ್ದಾರಿ ಇಕ್ಕೆಲಗಳಲ್ಲಿ ಸ್ವಚ್ಛತಾ ಕಾರ್ಯ

(ನ್ಯೂಸ್ ಕಡಬ) newskadaba.com ಅರಂತೋಡು, ಜ. 28. ಗ್ರಾಮ ಪಂಚಾಯತ್ ಅರಂತೋಡು ನೇತೃತ್ವದಲ್ಲಿ ಅರಂತೋಡು ಕೃಷಿ ಪತ್ತಿನ ಸಹಕಾರಿ ಸಂಘ, ನೆಹರೂ ಸ್ಮಾರಕ ಪದವಿಪೂರ್ವ ಕಾಲೇಜು, ರಾಷ್ಟ್ರೀಯ ಸೇವಾ ಯೋಜನಾ ಘಟಕ, ಶ್ರೀ ದುರ್ಗಾ ಮಾತೆ ಭಜನಾ ಮಂಡಳಿ ಸಹಯೋಗದಲ್ಲಿ ಗಣರಾಜ್ಯೋತ್ಸವ ಆಚರಣೆಯ ಅಂಗವಾಗಿ “ಪ್ರತಿದಿನ ಸ್ವಚ್ಛತೆ ಕಡೆ ಹತ್ತು ಹೆಜ್ಜೆಗಳು” ಎನ್ನುವ ಕಾರ್ಯಕ್ರಮವನ್ನು ಹಮ್ಮಿಕೊಂಡು ಅರಂತೋಡಿನ ಕುಲ್ಚಾರ್ ಸೇತುವೆಯಿಂದ ಎಲ್ಪಕಜೆ ತನಕ ರಾಜ್ಯ ಹೆದ್ದಾರಿಯ ಇಕ್ಕೆಲಗಳಲ್ಲಿ ಪ್ಲಾಸ್ಟಿಕ್ ಹೆಕ್ಕಿ ಗ್ರಾಮ ಪಂಚಾಯತ್ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ನಿವೃತ್ತ ಯೋಧ ಫಸೀಲ್ ನೇತೃತ್ವದಲ್ಲಿ ನೀಡಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರಮೇಶ್ ಸ್ವಚ್ಛತೆ ಕಾರ್ಯಕ್ಕೆ ಚಾಲನೆ ನೀಡಿದರು.


ಪಂ.ಅಧ್ಯಕ್ಷರಾದ ಹರಿಣಿ ದೇರಾಜೆ, ಉಪಾಧ್ಯಕ್ಷರು ಶ್ವೇತಾ, ಸದಸ್ಯರಾದ ಶಿವಾನಂದ ಕುಕ್ಕುಂಬಳ , ಕೇಶವ ಅಡ್ತಳೆ , ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ , ಯು.ಡಿ.ಗೀತಾ, ಭಾರತಿ ಪುರುಷೋತ್ತಮ, ಶಾಲಾ ಮುಖ್ಯಗುರು ಶ್ರೀ ಸೀತಾರಾಮ ಎಂ. ಕೆ. ಕುಸುಮಾಧರ ಅಡ್ಕಬಳೆ,
ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಶ್ರೀ ಮೋಹನ್ ಚಂದ್ರ , ದೈಹಿಕ ಶಿಕ್ಷಕರಾದ ಶ್ರೀಮತಿ ಶಾಂತಿ, ಉಪನ್ಯಾಸಕರಾದ ಸುರೇಶ್ ವಾಗ್ಲೆ , ಲಿಂಗಪ್ಪ ಎಂ, ಅಶ್ವಿನಿ, ಭಾಗ್ಯಶ್ರೀ, ಗೌರಿಶಂಕರ್, ವಿದ್ಯಾ ಶಾಲಿನಿ, ನಯನಾ, ಪದ್ಮಕುಮಾರ್ , ಬೃಂದಾ, ಧನ್ಯರಾಜ್ ಮತ್ತು ವಿದ್ಯಾರ್ಥಿಗಳು ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಪಂಚಾಯತ್ ನೌಕರರು ಭಾಗವಹಿಸಿದ್ದರು. ಗ್ರಾಮ ಪಂಚಾಯತ್ ವತಿಯಿಂದ ಲಘು ಉಪಾಹಾರ ನೀಡಲಾಯಿತು.
ಪಂ. ಅಭಿವೃದ್ಧಿ ಅಧಿಕಾರಿ ಶ್ರೀ ಜಯಪ್ರಕಾಶ್ ಸ್ವಚ್ಛತಾ ಕಾರ್ಯಕ್ಕೆ ಮಾರ್ಗದರ್ಶನ ನೀಡಿ, ಎಲ್ಲರಿಗೂ ಧನ್ಯವಾದ ಅರ್ಪಿಸಿದರು.

 

 

error: Content is protected !!

Join the Group

Join WhatsApp Group