ಉದ್ಯೋಗದ ಆಮಿಷವೊಡ್ಡಿ 25 ಲಕ್ಷ ರೂ. ವಂಚನೆ..! ➤ ವ್ಯಕ್ತಿಯಿಂದ ದೂರು ದಾಖಲು

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 25. ಉದ್ಯೋಗದ ಆಮಿಷವೊಡ್ಡಿ 25,49,079ರೂ. ವಂಚನೆ ಮಾಡಿದ ಆರೋಪಕ್ಕೆ ಸಂಬಂಧಿಸಿ ತಂಡವೊಂದರ ವಿರುದ್ದ ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ನಗರದ ವ್ಯಕ್ತಿಯೋರ್ವರು sign.com ವೆಬ್‌ಸೈಟ್ ನಲ್ಲಿ ನೌಕರಿಯ ಬಗ್ಗೆ 2021ರ ಎಪ್ರಿಲ್ ನಲ್ಲಿ ಹೇಳಿಕೊಂಡಿದ್ದು, ಬಳಿಕ ಅಂಕುರ್ ದೇಸಾಯಿ ಎಂಬಾತ ವ್ಯಕ್ತಿಗೆ ಕರೆಮಾಡಿ ಸೆಕ್ಯುರ್ ಕ್ಯಾರಿಯರ್.ಕಾಮ್ ವೆಬ್‌ಸೈಟ್ ನಲ್ಲಿ ತಮ್ಮ ವೈಯಕ್ತಿಯ ವಿಚಾರಗಳನ್ನು ನೋಂದಾಯಿಸುವಂತೆ ತಿಳಿಸಿದ್ದ. ಅದರಂತೆ ವ್ಯಕ್ತಿಯು 2,358ರೂ. ಪಾವತಿಸಿ ನೋಂದಾಯಿಸಿದ್ದರು. ಬಳಿಕ ಆರೋಪಿಗಳ ತಂಡವು ನಾನಾ ಉದ್ಯೋಗ ಖಾಲಿ ಇರುವ ಕಂಪನಿಗಳ ವಿವರ ನೀಡಿದ್ದು, ಅಲ್ಲದೇ ದಾಖಲಾತಿ ಪರಿಶೀಲನೆಗೆ ಶುಲ್ಕ ನೀಡುವಂತೆಯೂ ತಿಳಿಸಿದ್ದು, ಅದರಂತೆ ಆ ವ್ಯಕ್ತಿ 4,130ರೂ. ಗಳನ್ನು ತನ್ನ ಬ್ಯಾಂಕ್ ಖಾತೆಯಿಂದ ವರ್ಗಾವಣೆ ಮಾಡಿದ್ದರು. ಬಳಿಕ ಹಂತಹಂತವಾಗಿ 10,65,065ರೂ. ಗಳನ್ನು ಯುಪಿಐ ಮೂಲಕ ವರ್ಗಾವಣೆ ಮಾಡಿದ್ದರು. ಇನ್ನೂ ಹೆಚ್ಚಿನ ಹಣ ನೀಡಿದ್ದಲ್ಲಿ ಈಗಾಗಲೇ ಪಾವತಿಸಿರುವಂತಹ ಹಣವನ್ನು ಮರುಪಾವತಿ ಮಾಡಲಾಗುವುದು ಎಂದು ನಂಬಿಸಿ ಸುರತ್ಕಲ್ ಶಾಖೆಯಿಂದ 25,49,079ರೂ. ಗಳನ್ನು ವರ್ಗಾವಣೆ ಮಾಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Also Read  ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಆನ್ ಲೈನ್ ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ

 

error: Content is protected !!
Scroll to Top