ಪೊಲೀಸ್ ಜೀಪಿನಲ್ಲಿ ಡಿಜೆ ಸಾಂಗ್ ಹಾಕಿ ಕುಣಿದ ಕರ್ತವ್ಯ ನಿರತ ಪೊಲೀಸರು…! ➤ ಮೂವರ ಅಮಾನತು

(ನ್ಯೂಸ್ ಕಡಬ) newskadaba.com ಅಹಮದಾಬಾದ್, ಜ. 21. ಕರ್ತವ್ಯ ನಿರತ ಪೊಲೀಸರು ಪೊಲೀಸ್ ಜೀಪ್ ನಲ್ಲಿ ಡಿಜೆ ಸಾಂಗ್ ಹಾಕಿ ಕುಣಿದು ಕುಪ್ಪಳಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

ಗುಜರಾತ್ ನ ಕಛ್ ಜಿಲ್ಲೆಯಲ್ಲಿ ಚಲಿಸುತ್ತಿದ್ದ ಪೊಲೀಸ್ ಜೀಪ್ ನಲ್ಲಿ ನಡುಬೀದಿಯಲ್ಲಿಯೇ ಕುಳಿತು ಡಿಜೆ ಸಾಂಗ್ ಪ್ಲೇ ಮಾಡಿ ಡಾನ್ಸ್ ಮಾಡುತ್ತಾ ಕೂಗಾಡಿಕೊಂಡು ತೆರಳಿದ್ದಾರೆ. ಇವರು ಗಾಂಧಿಧಾಮ್ ಪೊಲೀಸ್ ಠಾಣಾ ಸಿಬ್ಬಂದಿ ಎಂದು ತಿಳಿದುಬಂದಿದೆ. ಇದೀಗ ಡಾನ್ಸ್ ಮಾಡಿದ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತ ಅಧಿಕಾರಿಗಳು ಮೂವರು ಪೊಲೀಸರನ್ನು ಅಮಾನತು ಮಾಡಿದ್ದಾರೆ.

Also Read  ಬೆಳ್ತಂಗಡಿ: ಬಾಲಕ ಸೇರಿ ಇಬ್ಬರು ಫಲ್ಗುಣಿ ನದಿಯಲ್ಲಿ ಮುಳುಗಿ ಮೃತ್ಯು

 

 

 

error: Content is protected !!