(ನ್ಯೂಸ್ ಕಡಬ) newskadaba.com ಮಂಗಳೂರು, ಜ. 21. ದ.ಕ ಜಿಲ್ಲೆಯಲ್ಲಿ ಗುರುವಾರದಂದು ಒಟ್ಟು 32 ವಿದ್ಯಾರ್ಥಿಗಳು ಹಾಗೂ ಏಳು ಮಂದಿ ಶಿಕ್ಷಕರಲ್ಲಿ ಕೊರೋನಾ ಸೋಂಕು ಕಂಡುಬಂದಿದ್ದು, ಇದುವರೆಗೆ ಹತ್ತು ಶಾಲೆಗಳನ್ನು ಮುಚ್ಚಲಾಗಿದೆ.
ಮಂಗಳೂರು ದಕ್ಷಿಣದ ಪೆರ್ಮನ್ನೂರಿನ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಐದು ವಿದ್ಯಾರ್ಥಿಗಳಲ್ಲಿ ಸೋಂಕು ಕಂಡುಬಂದ ಹಿನ್ನೆಲೆ ಒಂದು ವಾರಗಳ ಕಾಲ ತರಗತಿಗಳನ್ನು ಮುಚ್ಚಿ ಆನ್ ಲೈನ್ ತರಗತಿ ನಡೆಸಲಾಗುತ್ತದೆ. ಪುತ್ತೂರು ತಾಲೂಕಿನ ಉದನೆ ಬಿಷಪ್ ಪೋಲಿಕಾರ್ಷಸ್ ಪಬ್ಲಿಕ್ ಶಾಲೆಯ ಆರು ಮಕ್ಕಳು ಮತ್ತು ಓರ್ವ ಶಿಕ್ಷಕರಲ್ಲಿ ಅದೇರೀತಿ ಶಿರಾಡಿಯ ಸೈಂಟ್ ಅಂಟೋನಿ ಪ್ರೌಢಶಾಲೆಯ ಮೂವರು, ನೆಲ್ಯಾಡಿಯ ಜ್ಞಾನೋದಯ ಬೆಥನಿ ಆಂಗ್ಲ ಮಾಧ್ಯಮ ಶಾಲೆಯ ಆರು ಮಕ್ಕಳಲ್ಲಿ ಸೋಂಕು ಕಂಡುಬಂದಿದೆ. ಗುರುವಾರದವರೆಗೆ ಬಂಟ್ವಾಳದ 8 ಮಕ್ಕಳು ಹಾಗೂ ಇಬ್ಬರು ಶಿಕ್ಷಕರು, ಬೆಳ್ತಂಗಡಿ- 2, ಮಂಗಳೂರು ಉತ್ತರ- 5 ವಿದ್ಯಾರ್ಥಿಗಳು, 2 ಶಿಕ್ಷಕರು, ಮಂಗಳೂರು ದಕ್ಷಿಣದಲ್ಲಿ ಇಬ್ಬರು ವಿದ್ಯಾರ್ಥಿಗಳು, ಪುತ್ತೂರು 9 ವಿದ್ಯಾರ್ಥಿಗಳು, ಇಬ್ಬರು ಶಿಕ್ಷಕರು, ಸುಳ್ಯದಲ್ಲಿ ತಲಾ ಓರ್ವ ವಿದ್ಯಾರ್ಥಿ ಮತ್ತು ಶಿಕ್ಷಕರಲ್ಲಿ ಸೋಂಕು ಕಂಡುಬಂದಿದೆ. ಒಟ್ಟಾರೆ ಜಿಲ್ಲೆಯಲ್ಲಿ ಇಂದು 32 ವಿದ್ಯಾರ್ಥಿಗಳಲ್ಲಿ ಹಾಗೂ 7 ಮಂದಿ ಶಿಕ್ಷಕರಲ್ಲಿ ಸೋಂಕು ದೃಢಪಟ್ಟಿದೆ.