ಜನನ-ಮರಣ ನೋಂದಣಿ ಕಡ್ಡಾಯವಾಗಿ ದಾಖಲಿಸಲು ಜಿಲ್ಲಾಧಿಕಾರಿ ಸೂಚನೆ

(ನ್ಯೂಸ್ ಕಡಬ) newskadaba.com. ಮಂಗಳೂರು, ಜ. 20. ಜಿಲ್ಲೆಯಲ್ಲಿ ಜನನ ಹಾಗೂ ಮರಣ ನೋಂದಣಿ ಪ್ರಕ್ರಿಯೆಯನ್ನು ಶೇ.100ರಷ್ಟು ಕಡ್ಡಾಯವಾಗಿ ದಾಖಲಿಸಲೇಬೇಕು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಸೂಚಿಸಿದ್ದಾರೆ.

ಅವರು ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಜನನ-ಮರಣ ನೋಂದಣಿ ಹಾಗೂ ಕೃಷಿ ಅಂಕಿ ಅಂಶಗಳ ಸಮನ್ವಯ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜನನ-ಮರಣದ ಯಾವುದೇ ನೋಂದಣಿ ಕೂಡ ಬಿಟ್ಟುಹೋಗಬಾರದು ಮತ್ತು ಮರಣ ನೋಂದಣಿಯಲ್ಲಿ ಮರಣ ಕಾರಣವನ್ನು ನಿಖರವಾಗಿ ದಾಖಲಿಸಬೇಕು. ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಈ ಪ್ರಕ್ರಿಯೆ ನಿರ್ವಹಿಸುವ ಅಧಿಕಾರಿಗಳು ಹಾಗೂ ಸಿಬ್ಬಂದಿ ಎಚ್ಚರಿಕೆಯಿಂದ ನಿರ್ವಹಿಸಬೇಕು. ಯಾವ ನೋಂದಣಿ ಘಟಕದಲ್ಲಿ ಅವು ಸಂಭವಿಸುತ್ತದೆಯೋ ಅಲ್ಲಿಯೇ ಕಡ್ಡಾಯವಾಗಿ ದಾಖಲಿಸುವಂತೆ ಸಭೆಯಲ್ಲಿದ್ದ ನೋಂದಣಿದಾರರಿಗೆ ಸೂಚಿಸಿದರು. ಡಿಜಿಟಲ್ ಕೀ ಬಳಸಿಯೇ ಈ ನೋಂದಣಿ ಪ್ರಕ್ರಿಯೆನ್ನು ನಿರ್ವಹಿಸಬೇಕು. ಪ್ರಸ್ತಾವನೆಗಳಿದ್ದರೆ ಸಲ್ಲಿಸುವಂತೆಯೂ ಅವರು ಈ ಸಂದರ್ಭದಲ್ಲಿ ತಿಳಿಸಿದರು.

Also Read  ಕಡಬ: ನೇಣುಬಿಗಿದು ಯುವಕ ಆತ್ಮಹತ್ಯೆ

 

 

 

error: Content is protected !!
Scroll to Top