ಕೊರೋನಾ ಪ್ರಕರಣ ದೃಢಪಟ್ಟ ಹಿನ್ನೆಲೆ ➤ ಮಂಗಳೂರಿನ ಹಲವು ಶಾಲೆಗಳು ಬಂದ್…!

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 19. ದ.ಕ ಯಾವುದೇ ಶಾಲೆಯಲ್ಲಿ ಐದಕ್ಕಿಂತ ಹೆಚ್ಚು ಕೊರೊನಾ ಪ್ರಕರಣಗಳು ಕಂಡುಬಂದಲ್ಲಿ ಅಂತಹ ಶಾಲೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡುವಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ ಬೆನ್ನಲ್ಲೇ ಜಿಲ್ಲೆಯ ಕೆಲವು ಶಾಲೆಗಳಲ್ಲಿ ಕೊರೋನಾ ಪ್ರಕರಣಗಳು ಕಂಡುಬಂದಿರುವುದರಿಂದ ಅಂತಹ ಶಾಲೆಗಳನ್ನು ಒಂದು ವಾರದ ಮಟ್ಟಿಗೆ ಬಂದ್ ಮಾಡಲಾಗಿದೆ.

ಮಂಗಳೂರಿನ ಬೆಂಗ್ರೆ ಕಸಬಾದ ಸರಕಾರಿ ಪ್ರೌಢಶಾಲೆ, ಡೊಂಗರಕೇರಿಯ ಕೆನರಾ ಸಿಬಿಎಸ್ಇ ಶಾಲೆ, ಬಜ್ಪೆಯ ಅನ್ಸಾರ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಮುಲ್ಕಿಯ ವ್ಯಾಸ ಮಹರ್ಷಿ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಎಡಪದವಿನ ವಿವೇಕಾನಂದ ಪಿಯು ಕಾಲೇಜು ಹಾಗೂ ಮುಚ್ಚೂರಿನ ಸರಕಾರಿ ಪ್ರೌಢಶಾಲೆಯನ್ನಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಆದೇಶಿಸಲಾಗಿದೆ.

Also Read  ಕಾಂಗ್ರೆಸ್ ಮುಖಂಡನ ಸಹೋದರನ ಮೇಲೆ ಗುಂಡಿನ ದಾಳಿ

 

 

school

error: Content is protected !!
Scroll to Top