ಬಿಸಿಯೂಟ ಸೇವಿಸಿ 70 ವಿದ್ಯಾರ್ಥಿಗಳು ಅಸ್ವಸ್ಥ..! ➤ ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ) newskadaba.com ಚಾಮರಾಜನಗರ, ಜ. 11. ಶಾಲೆಯಲ್ಲಿನ ಮಧ್ಯಾಹ್ನದ ಬಿಸಿಯೂಟ ಸೇವಿಸಿ ಸುಮಾರು 70 ವಿದ್ಯಾರ್ಥಿಗಳು ಅಸ್ವಸ್ಥರಾದ ಘಟನೆ ಜಿಲ್ಲೆಯ ಹನೂರು ವಡಕೆಹಳ್ಳದಲ್ಲಿ ನಡೆದಿದೆ.


ಶಾಲಾ ಮಕ್ಕಳು ಸೇವಿಸಿದ್ದ ಬಿಸಿಯೂಟದಲ್ಲಿ ಹಲ್ಲಿಯೊಂದು ಸತ್ತು ಬಿದ್ದಿರುವುದಾಗಿ ಹೇಳಲಾಗಿದ್ದು, ಅಸ್ವಸ್ಥ ಮಕ್ಕಳನ್ನು ಕೌದಲ್ಲಿಂಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಶಾಲೆಯಲ್ಲಿ 90ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, 70 ಕ್ಕೂ ಹೆಚ್ಚು ಮಕ್ಕಳು ಬಿಸಿಯೂಟ ಸೇವಿಸಿ ವಾಂತಿ ಮಾಡುವುದನ್ನು ಕಂಡ ಇತರ ವಿದ್ಯಾರ್ಥಿಗಳು ಊಟ ಸೇವಿಸಿಲ್ಲ ಎಂದು ತಿಳಿದುಬಂದಿದೆ.

Also Read  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾವತಿಯಿಂದ ➤ಉದರ ದರ್ಶಕ ಶಸ್ತ್ರ ಚಿಕಿತ್ಸೆ

error: Content is protected !!
Scroll to Top