(ನ್ಯೂಸ್ ಕಡಬ) newskadaba.com ಕಡಬ, ಜ. 05. ಇನ್‌ಫೋಸಿಸ್ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಕಡಬ ಘಟಕಕ್ಕೆ ಕಂಪ್ಯೂಟರ್ ಅನ್ನು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಇವರು ಕಡಬ ಘಟಕದ ಘಟಕಾಧಿಕಾರಿಯಾದ ಶ್ರೀ ತೀರ್ಥೇಶ್ ಅಮೈ ಇವರಿಗೆ ಹಸ್ತಾಂತರಿಸಲಾಯಿತು ಹಾಗೂ ಇನ್ನು ಮುಂದಿನ ದಿನಗಳಲ್ಲಿ ಕಾಗದ ರಹಿತ ಕಛೇರಿ ಆಗಬೇಕು ಎಂದು ನುಡಿದರು.
ಈ ಸಂದರ್ಭದಲ್ಲಿ ಕಡಬ ಘಟಕದ ಗೃಹರಕ್ಷಕರಾದ ರವಿ, ಉಮೇಶ್, ಪವಿತ್ ಹಾಗೂ ಮಂಗಳೂರು ಘಟಕದ ಗೃಹರಕ್ಷಕರಾದ ದುಷ್ಯಂತ್, ಮಹೇಶ್ ಪ್ರಸಾದ್, ಜಯಲಕ್ಷ್ಮಿ, ಸುಲೋಚನ ಮೊದಲಾದವರು ಉಪಸ್ಥಿತರಿದ್ದರು.