ಮಹಿಳೆಗೆ ಧಮ್ಕಿ ➤ ಆರ್ ಟಿಐ ಕಾರ್ಯಕರ್ತ ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 21. ಸರಕಾರಿ ಕಛೇರಿಯಲ್ಲಿ ಮಹಿಳಾ ಅಧಿಕಾರಿಯೋರ್ವರಿಗೆ ಧಮ್ಕಿ ಹಾಕಿರೋ ಹಿನ್ನೆಲೆ ಓರ್ವ ಆರ್ಟಿಐ ಕಾರ್ಯಕರ್ತನನ್ನು ಬಂಧಿಲಾಗಿದೆ.

ಬಂಧಿತನನ್ನು ಕೃಷ್ಣ ಮೂರ್ತಿ ಎಂದು ಗುರುತಿಸಲಾಗಿದೆ. ಈತ ಡಿ. 18ರಂದು ಕತ್ರಿಗುಪ್ಪೆಯ ಬಿಬಿಎಂಪಿ ವಾರ್ಡ್ ಇಂಜಿನಿಯರ್ ಕಛೇರಿಗೆ ತೆರಳಿ, ಅಸಿಸ್ಟೆಂಟ್ ಇಂಜಿನಿಯರ್ ಓರ್ವರಿಗೆ ‘ನಿನ್ನನ್ನು ಕೆಲಸದಿಂದ ಹೇಗೆ ತೆಗಿಸಬೇಕು ಅಂತ ಗೊತ್ತಿದೆ. ಸರಕಾರದ ಯಾವುದೇ ಡಿಪಾರ್ಟ್ಮೆಂಟ್ ಗೆ ಹೋದರೂ ಬಿಡುವುದಿಲ್ಲ’ ಎಂದು ಧಮ್ಕಿ ಹಾಕಿದ್ದನು. ಈ ಕುರಿತು ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ಬಂಧಿಸಿದ್ದಾರೆ.

Also Read  ಬೆಳ್ತಂಗಡಿ :ಶಾಲೆಗೆ ನುಗ್ಗಿ ದರೋಡೆ ➤ ದಾಖಲೆಪತ್ರಗಳನ್ನು ಸುಟ್ಟ ಕಳ್ಳರು

error: Content is protected !!
Scroll to Top