ಮಾನಸಿಕ ಅಸ್ವಸ್ಥನಿಂದ ತಾಯಿ ಹಾಗೂ ಸಹೋದರನಿಗೆ ಹಲ್ಲೆ..! ➤ ಇಬ್ಬರು ಗಂಭೀರ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಡಿ. 17. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿಯೋರ್ವರು ತನ್ನ ತಾಯಿ ಹಾಗೂ ಸಹೋದರರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ತಾಲೂಕಿನ ಕುವೆಟ್ಟು ಗ್ರಾಮದ ಕೊಂಕೋಡಿ ಎಂಬಲ್ಲಿ ನಡೆದಿದೆ.


ಆರೋಪಿ ಸಿರಿಲ್ ಪಿಂಟೋ ಎನ್ನಲಾಗಿದೆ. ಗಾಯಗೊಂಡವರನ್ನು ಆರೋಪಿಯ ತಾಯಿ ಫೆಲ್ಸಿ ಮೋನಿಸ್ ಹಾಗೂ ಸಹೋದರ ಹೆನ್ರಿ ಪಿಂಟೋ ಎಂದು ಗುರುತಿಸಲಾಗಿದೆ. ಈತ ಡಿ. 14ರಂದು ರಾತ್ರಿ ಅಮಲು ಪದಾರ್ಥ ಸೇವಿಸಿ ಬಂದಿದ್ದ ಸಹೋದರನಿಗೆ ಮರದ ದೊಣ್ಣೆಯಿಂದ ಥಳಿಸಿ ತಲೆ ಹಾಗೂ ಕೈಗಳಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆ ಪಡೆದು ಮನೆಗೆ ಮರಳಿದ್ದನು. ಮರುದಿನ ಡಿ. 15ರಂದು ಆರೋಪಿ ಸಿರಿಲ್, ತನ್ನ ತಾಯಿ ಹಾಗೂ ಗಾಯಗಳಾಗಿ ಮಲಗಿದ್ದ ಸಹೋದರ ಹೆನ್ರಿ ಪಿಂಟೋ ಮೇಲೆ ಹಲ್ಲೆ ನಡೆಸಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಇಬ್ಬರಿಗೂ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಬಳಿಕ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಲಡ್ಡು ವಿವಾದ- ಸ್ವತಂತ್ರ ಸಮಿತಿ ರಚಿಸಿ; ಸುಬ್ರಮಣಿಯನ್ ಸ್ವಾಮಿ

 

error: Content is protected !!
Scroll to Top