ಮಕ್ಕಳಿಗೆ ಬಿಸಿಯೂಟದ ಜೊತೆಗೆ ಮೊಟ್ಟೆ ಕೊಡುವಂತೆ ದ.ಕ ಜಿಲ್ಲಾಧಿಕಾರಿಗೆ ಸಿಎಫ್ಎಂ ಡಿ ಮನವಿ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 16. ರಾಜ್ಯದ ಏಳು ಜಿಲ್ಲೆಗಳಲ್ಲಿ ಶಾಲಾ ಮಕ್ಕಳಿಗೆ ಮೊಟ್ಟೆಯನ್ನು ಕೊಡುವ ಬಗ್ಗೆ ಸರಕಾರವು ಕೈಗೊಂಡ ನಿರ್ಧಾರವನ್ನು ಸಿಟಿಝೆನ್ ಫೋರಂ ಫಾರ್ ಮಂಗಳೂರು ಡೆವೆಲಪ್ಮೆಂಟ್ (ಸಿಎಂಎಫ್ ಡಿ) ಸ್ವಾಗತಿಸಿದೆ.


ಈ ಕುರಿತು ದ.ಕ ಜಿಲ್ಲಾಧಿಕಾರಿಗೆ ಪತ್ರ ಬರೆದ ಸಿಎಫ್ಎಂ ಡಿ, ರಾಷ್ಟ್ರೀಯ ಆಹಾರ ಭದ್ರತಾ ಕಾನೂನಿನ ಪ್ರಕಾರ ಮಗುವಿನ ಆಹಾರದ ಹಕ್ಕಾಗಿ ಮಧ್ಯಾಹ್ನದ ಬಿಸಿಯೂಟ ದೊರೆತಿದ್ದು, ದೇಶದಲ್ಲಿ ಪೆಡಂಭೂತವಾಗಿ ಬೆಳೆದು ನಿಂತಿರುವ ಮಕ್ಕಳ ಅಪೌಷ್ಟಿಕತೆಯ ನಿವಾರಣೆಗೆ ಇದು ಸರಿಯಾದ ಹೆಜ್ಜೆ ಎಂದು ತಿಳಿಸಿದೆ. ಈಗಾಗಲೇ ರಾಜ್ಯದ ಕೆಲವು ಭಾಗಗಳಲ್ಲಿ ಮೊಟ್ಟೆಗಳನ್ನು ನೀಡುತ್ತಿದ್ದು, ಇದನ್ನು ದ.ಕ ಜಿಲ್ಲೆಗೂ ವಿಸ್ತರಿಸಬೇಕು. ಮೊಟ್ಟೆ ತಿನ್ನುವ ಮಕ್ಕಳಿಗೆ ದ.ಕ ಜಿಲ್ಲೆಯಲ್ಲೂ ಊಟದೊಂದಿಗೆ ವಿತರಿಸಬೇಕು ಎಂದು ಸಿಎಫ್ಎಂ ಡಿ ತಿಳಿಸಿದೆ.

Also Read  ಕೊಲ್ಲಮೊಗ್ರ: ತಾತ್ಕಾಲಿಕವಾಗಿ ಕಡಂಬಳ ಸೇತುವೆ ದುರಸ್ಥಿ

error: Content is protected !!
Scroll to Top