ಬೆಳ್ತಂಗಡಿ: ಆಟೋದಲ್ಲಿ ಅಕ್ರಮ ಸಾಗಾಟ ➤ ಆರೋಪಿಗಳು ಪರಾರಿ, ಗೋವು ಸಹಿತ ವಾಹನ ವಶಕ್ಕೆ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಡಿ. 16. ಅಕ್ರಮ ಗೋಸಾಗಾಟ ಮಾಡುತ್ತಿದ್ದುದನ್ನು ಭಜರಂಗದಳ ಕಾರ್ಯಕರ್ತರು ತಡೆದಿದ್ದು, ಈ ವೇಳೆ ಇಬ್ಬರು ಆರೋಪಿಗಳು ಪರಾರಿಯಾದ ಘಟನೆ ತಾಲೂಕಿನ ಕಾಯರ್ತಡ್ಕ ಸಮೀಪದ ಬೀಜದಡಿ ಎಂಬಲ್ಲಿ ನಡೆದಿದೆ.


ಬೀಜದಡಿ ಎಂಬಲ್ಲಿ ಅಕ್ರಮ ಗೋಸಾಗಾಟ ನಡೆಯುತ್ತಿದೆ ಎಂಬ ಮಾಹಿತಿ ಪ್ರಕಾರ ದಾಳಿ ನಡೆಸಿದ ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಾರ್ಯಕರ್ತರು ತಡೆದಿದ್ದು, ಈ ವೇಳೆ ಆರೋಪಿಗಳಾದ ರವೀಂದ್ರ ಪುತ್ಯೆ ಹಾಗೂ ಶ್ರೀಧರ ಪಂಚಮಿಪಾದೆ ಎಂಬವರು ಪರಾರಿಯಾಗಿದ್ದಾರೆ. ವಾಹನ ಹಾಗೂ ಗೋವನ್ನು ಕಾರ್ಯಕರ್ತರು ಧರ್ಮಸ್ಥಳ ಪೊಲೀಸರ ವಶಕ್ಕೆ ನೀಡಿದ್ದು, ಪೊಲೀಸರು ಆರೋಪಿಗಳ ಬಂದನಕ್ಕೆ ಬಲೆ ಬೀಸಿದ್ದಾರೆ ಎನ್ನಲಾಗಿದೆ.

Also Read  ಬಹಿರಂಗ ಹರಾಜು

error: Content is protected !!
Scroll to Top