ಕೇರಳದಲ್ಲಿ ಹಕ್ಕಿ ಜ್ವರ ಪತ್ತೆ..! ➤ ಕರ್ನಾಟಕಕ್ಕೂ ಕಾಲಿಡುವ ಭೀತಿ

(ನ್ಯೂಸ್ ಕಡಬ) newskadaba.com ಕೇರಳ, ಡಿ. 10. ಕೇರಳದ ಕುಟ್ಟಿನಾಡ್ ವಲಯದ ಆಲಪ್ಪುಝಃ ಎಂಬಲ್ಲಿ ಹಕ್ಕಿಜ್ವರ ಪತ್ತೆಯಾಗಿದ್ದು, ಇದು ಅತ್ಯಂತ ವೇಗವಾಗಿ ಕೋಳಿ ಮತ್ತು ಬಾತುಕೋಳಿಗಳಿಗೆ ಹರಡುತ್ತಿರುವ ಹಿನ್ನೆಲೆ ಸೂಕ್ತ ಕಟ್ಟೆಚ್ಚರ ವಹಿಸಲಾಗಿದೆ.

ರೈತರೋರ್ವರು ಸಾಕಿದ್ದ ಸಾವಿರಾರು ಬಾತುಕೊಳಿಗಳು ದಿಢೀರ್ ಆಗಿ ಮೃತಪಟ್ಟಿದ್ದು, ಈ ಹಿನ್ನೆಲೆ ಹಕ್ಕಿಜ್ವರದ ಆತಂಕ ಶುರುವಾಗಿದ್ದಹ, ಅತ್ಯಂತ ವೇಗವಾಗಿ ಇದು ಇತರೆಡೆಗೂ ಹರಡುತ್ತಿರುವ ಹಿನ್ನೆಲೆ, ಕೋಳಿ, ಬಾತುಕೋಳಿ ಹಾಗೂ ಮೊಟ್ಟೆ ಮೊದಲಾದವುಗಳ ಸಾಗಾಟಕ್ಕೆ ನಿರ್ಬಂಧಿಸಲಾಗಿದೆ. ಮಂಡ್ಯದ ಕುಕ್ಕರಹಳ್ಳಿ ಎಂಬಲ್ಲಿ ಇತ್ತೀಚೆಗೆ ಮೂರು ಕೊಕ್ಕರೆಗಳು ಶಂಕಿತ ರೀತಿಯಲ್ಲಿ ಮೃತಪಟ್ಟಿದ್ದು, ಇದರಿಂದಾಗಿ ಕರ್ನಾಟಕದಲ್ಲೂ ಹಕ್ಕಿಜ್ವರದ ಆತಂಕ ಎದುರಾಗಿದೆ.

Also Read  ರೈತ ಸಂಘಟನೆಗಳ ಬೃಹತ್ ಪ್ರತಿಭಟನಾರ್ಯಾಲಿ ಕಲಬುರಗಿ ಬಂದ್ಗೆಾ ಮಿಶ್ರ ಪ್ರತಿಕ್ರಿಯೆ; ಜನಜೀವನ ಸಹಜ

 

error: Content is protected !!
Scroll to Top