ಸುಬ್ರಹ್ಮಣ್ಯ: ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಎದುರಾದ ಬಸ್ ಸಮಸ್ಯೆ ➤ ಕೂಡಲೇ ಬಸ್ ಒದಗಿಸುವಂತೆ ಎಬಿವಿಪಿ ವತಿಯಿಂದ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಡಿ. 03. ಕಡಬ, ಇಚ್ಲಂಪಾಡಿ, ಗುಂಡ್ಯ ಹಾಗೂ ಗುತ್ತಿಗಾರು ಮಾರ್ಗದಲ್ಲಿ ಬಸ್ಸಿನ ಸಮಸ್ಯೆ ಎದುರಾಗಿದ್ದು, ಇದರ ವಿರುದ್ದ ಎಬಿವಿಪಿ ಕುಕ್ಕೇ ಸುಬ್ರಹ್ಮಣ್ಯದ ವತಿಯಿಂದ ಸುಬ್ರಹ್ಮಣ್ಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಲಾಯಿತು.

ಕಡಬ, ಇಚ್ಲಂಪಾಡಿ, ಗುಂಡ್ಯ, ಗುತ್ತಿಗಾರು ಮಾರ್ಗದಲ್ಲಿ ಬಸ್ಸಿನ ಸಮಸ್ಯೆಯಿಂದಾಗಿ ಈ ಭಾಗದಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ. ಇದನ್ನು ಕೂಡಲೇ ಸರಿಪಡಿಸಿ ಈ ಮಾರ್ಗದಲ್ಲಿ ಬಸ್ಸು ಒದಗಿಸುವಂತೆ ಪ್ರತಿಭಟನೆಯಲ್ಲಿ ಒತ್ತಾಯಿಸಲಾಯಿತು. ಪ್ರತಿಭಟನಾ ಅಂಗವಾಗಿ ವನದುರ್ಗ ದೇವಸ್ಥಾನದಿಂದ ಜಾಥಾ ಹೊರಟು ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಪ್ರತಿಭಟಣೆ ಮಾಡಲಾಯಿತು. ನಿಕಟಪೂರ್ವ ನಗರ ಕಾರ್ಯದರ್ಶಿ ಪ್ರಕಾಶ್ ಬಾಳುಗೋಡು ರವರು ಪ್ರತಿಭಟನೆಯ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಪುತ್ತೂರು ಜಿಲ್ಲಾ ಸಂಚಾಲಕರಾದ ಹಿತೇಶ್ ಕಟ್ರಮನೆ, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಮಂದಾರ ಬಾಳುಗೋಡು, ಹಿರಿಯ ಕಾರ್ಯಕರ್ತ ರಕ್ಷಿತ್ ಪರಮಲೆ ಹಾಗೂ ಎಲ್ಲಾ ಕಾರ್ಯಕರ್ತರು ಉಪಸ್ಥಿತರಿದ್ದರು.

Also Read  ಚಾಕುವಿನಿಂದ ಇರಿದು ವ್ಯಕ್ತಿಯ ಬರ್ಬರ ಹತ್ಯೆ...!!!

 

 

 

error: Content is protected !!
Scroll to Top