ಪೂಜೆಗೆ ಕರಿಮಣಿ ಸರ ಇಟ್ಟು ಮಹಿಳೆಗೆ ವಂಚಿಸಿದ ಜ್ಯೋತಿಷಿ..!

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 01. ಪೂಜಾ ಸಂದರ್ಭದಲ್ಲಿ ಕಲಶಕ್ಕೆಂದು ಇಡಲಾಗಿದ್ದ ಕರಿಮಣಿ ಸರವೊಂದನ್ನು ವಾಪಸು ನೀಡದೇ ಜ್ಯೋತಿಷಿಯೋರ್ವ ಮಹಿಳೆಗೆ ವಂಚಿಸಿರುವ ಘಟನೆ ಕಾವೂರು ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ನಡೆದಿದೆ.

ಮನೆಯಲ್ಲಿನ ಕಷ್ಟ ಪರಿಹಾರಕ್ಕೆಂದು ಮಹಿಳೆಯೋರ್ವರು ಅ. 13 ರಂದು ಕುಂಜತ್ ಬೈಲಿನಲ್ಲಿರುವ ಜ್ಯೋತಿಷಿ ವಿನೋದ್ ಪೂಜಾರಿ ಎಂಬವರ ಬಳಿ ಹೋಗಿದ್ದರು. ಈ ಸಂದರ್ಭ ವಿನೋದ್ ಪೂಜಾರಿ, ನಿಮಗೆ ತುಂಬಾ ದೋಷವಿದ್ದು, ಆ ದೋಷದಿಂದ ಮುಕ್ತಿ ಹೊಂದಲು ಪೂಜೆ ಮಾಡಿಸಿಕೊಡುತ್ತೇನೆ. ಪೂಜೆಯ ಸಮಯ ಕಲಶಕ್ಕೆ ಇಡಲು ಚಿನ್ನದ ಆಭರಣ ತರಬೇಕು ಎಂದಿದ್ದರು. ಇದರಂತೆ ಮಹಿಳೆಯು ಸುಮಾರು ಐದೂವರೆ ಪವನ್ ತೂಕದ ಚಿನ್ನದ ಕರಿಮಣಿ ಸರವನ್ನು ಜ್ಯೋತಿಷಿಗೆ ಒಪ್ಪಿಸಿದ್ದಾರೆ. ಬಳಿಕ ಮಹಿಳೆ ನೀಡಿದ ಕರಿಮಣಿ ಸರವನ್ನು 15 ದಿನಗಳ ಕಾಲ ಪೂಜೆ ಮಾಡಿ ವಾಪಸ್​​ ನೀಡುವುದಾಗಿ ವಿನೋದ್ ಪೂಜಾರಿ ತಿಳಿಸಿದ್ದರು. ಅದರೆ ಸರ ವಾಪಸ್​​ ನೀಡದೆ ತಲೆಮರೆಸಿಕೊಂಡಿದ್ದಾನೆ ಎಂದು ಮಹಿಳೆಯು ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Also Read  ವಿಟ್ಲ: ಲಾರಿ ಢಿಕ್ಕಿ ಹೊಡೆದು ವ್ಯಕ್ತಿ ಸ್ಥಳದಲ್ಲೇ ದುರ್ಮರಣ

error: Content is protected !!
Scroll to Top