(ನ್ಯೂಸ್ ಕಡಬ) newskadaba.com ಪದ್ಮುಂಜ, ನ. 29. ಇಲ್ಲಿನ ನೆಕ್ಕಿಲು ನಿವಾಸಿ ಸಾಂತಪ್ಪ ಪೂಜಾರಿ ಎಂಬವರ ಮನೆ ಸಮೀಪವಿರುವ ದನದ ಹಟ್ಟಿಗೆ ಚಿರತೆ ದಾಳಿ ಮಾಡಿದ ಘಟನೆ ವರದಿಯಾಗಿದೆ.
ಮನೆಯವರೆಲ್ಲರೂ ರಾತ್ರಿ ಮಲಗಿದ್ದ ವೇಳೆ ಸಾಕು ನಾಯಿಯೊಂದು ಬೊಗಳಲು ಶುರುಮಾಡಿದ್ದು, ಬೊಬ್ಬೆ ಕೇಳಿ ಮನೆಯವರೆಲ್ಲರೂ ಎದ್ದು ಬಂದು, ಹಟ್ಟಿಯೊಳಗಿದ್ದ ಹಸುವನ್ನು ಹಿಡಿಯಲೆತ್ನಿಸುತ್ತಿದ್ದ ಚಿರತೆಯನ್ನು ಕಂಡು ಜೋರಾಗಿ ಬೊಬ್ಬೆ ಹೊಡೆದು ಓಡಿಸಲೆತ್ನಿಸಿದ್ದಾರೆ. ಕೂಡಲೇ ಚಿರತೆಯು ಸ್ಥಳದಿಂದ ಕಾಲ್ಕಿತ್ತಿದ್ದು, ಹಸುವು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದೆ ಎಂದು ತಿಳಿದುಬಂದಿದೆ. ಸೂಕ್ತ ಸಮಯಪ್ರಜ್ಞೆಯಿಂದಾಗಿ ಹಸುವಿಗೆ ಆಗಬಹುದಾದ ಪ್ರಾಣಾಪಾಯವೊಂದು ತಪ್ಪಿದಂತಾಗಿದೆ. ಹೆಜ್ಜೆ ಗುರುತಿನ ಆಧಾರದ ಮೇಲೆ ಅರಣ್ಯ ಇಲಾಖೆಯವರು ಚಿರತೆಯೆಂದು ಸಂಶಯ ವ್ಯಕ್ತಪಡಿಸಿದ್ದು, ಬೋನು ಇರಿಸುವುದಾಗಿ ತಿಳಿಸಿದ್ದಾರೆ.