(ನ್ಯೂಸ್ ಕಡಬ) newskadaba.com ಮೈಸೂರು, ನ. 29. ಅಪ್ರಾಪ್ತ ಬಾಲಕಿಯೋರ್ವಳ ಮೇಲೆ ಸ್ವತಃ ಅಣ್ಣನೇ ಅತ್ಯಾಚಾರಗೈದು ಬಾಲಕಿ ಗರ್ಭಿಣಿಯಾದ ಘಟನೆ ನಗರದ ಬಡಾವಣೆಯೊಂದರಲ್ಲಿ ನಡೆದಿದೆ.
ತಂದೆ ತಾಯಿಯನ್ನು ಕಳೆದುಕೊಂಡ ತಂಗಿಯು ತನ್ನ ಇಬ್ಬರು ಅಣ್ಣಂದಿರ ಜೊತೆ ವಾಸವಾಗಿದ್ದು, ಇದರಲ್ಲಿ ಒಬ್ಬ ಮದ್ಯ ಸೇವಿಸಿ ನಿರಂತರ ಅತ್ಯಾಚಾರವೆಸಗುತ್ತಿದ್ದು, ಪರಿಣಾಮ ಬಾಲಕಿ ಗರ್ಭಿಣಿಯಾಗಿದ್ದಳು. ಈ ಕುರಿತು ತನಿಖೆ ನಡೆಸಿದಾಗ ಅಣ್ಣನೇ ಅತ್ಯಾಚಾರಗೈದ ವಿಚಾರ ಬೆಳಕಿಗೆ ಬಂದಿದೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Also Read ಕಡಬ ಪಿಲ್ಯ ಫ್ಯಾಷನ್ ಇನ್‌ಸ್ಟಾಗ್ರಾಂ GIVEAWAY ಕಾರ್ಯಕ್ರಮ - ಸ್ಮಾರ್ಟ್ ಫೋನ್ ಗೆದ್ದ 10 ನೇ ತರಗತಿಯ ಬಾಲಕ