ಮಚ್ಚಿನಿಂದ ಕೊಚ್ಚಿ ಸಹೋದರರಿಬ್ಬರ ಕೊಲೆಯತ್ನ ➤ ಮೂವರು ಅರೆಸ್ಟ್

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ನ. 24.‌ ಸಹೋದರರಿಬ್ಬರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈಯ್ಯಲೆತ್ನಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಗೋವಿಂದೂರು ಎಂಬಲ್ಲಿ ನಡೆದಿದ್ದು, ತಕ್ಷಣವೇ ಕಾರ್ಯಪೃವೃತ್ತರಾದ ಪೊಲೀಸರು ಮಂಗಳವಾರ ರಾತ್ರಿಯೇ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಹಲ್ಲೆಗೊಳಗಾದವರನ್ನು ನೆಲ್ಲಿಗುಡ್ಡೆ ನಿವಾಸಿಗಳಾದ ಹೈದರ್ ಯಾನೆ ಜಾಕ್ ಹೈದರ್ ಮತ್ತು ಅವರ ಅಣ್ಣ ರಫೀಕ್ ಎಂದು ಗುರುತಿಸಲಾಗಿದೆ. ಮಂಗಳವಾರದಂದು ರಾತ್ರಿ ಸುಮಾರು 11:45ರ ವೇಳೆ ಹೈದರ್ ಮತ್ತು ರಫೀಕ್ ಆಟೋದಲ್ಲಿ ಬಾಡಿಗೆ ಹೋಗಿ ವಾಪಾಸ್ಸು ಮನೆಗೆ ಹಿಂತಿರುಗುತ್ತಿದ್ದ ವೇಳೆ ಕಳಿಯ ಗ್ರಾಮದ ಗೋವಿಂದೂರು ಶಾಲೆಯ ಬಳಿಯಲ್ಲಿ ಅಶುತೋಷ್ ಮತ್ತು ಇತರ ಮೂವರು ಕಾರು ಮತ್ತು ಬೈಕ್ ಗಳಲ್ಲಿ ಅಡ್ಡಗಟ್ಟಿ ಕಣ್ಣಿಗೆ ಮೆಣಸಿನ ಹುಡಿ ಎರಚಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದು, ಹಲ್ಲೆಯ ಸಂದರ್ಭ ಗಾಯಾಳುಗಳು ಜೋರಾಗಿ ಕಿರುಚಾಡಿದ್ದರಿಂದ ಬೊಬ್ಬೆ ಕೇಳಿ ಸ್ಥಳೀಯ ನಿವಾಸಿಗಳು ಓಡಿ ಬಂದಿದ್ದಾರೆ. ಈ ವೇಳೆ ಅರೋಪಿಗಳು ನಿಮ್ಮನ್ನು ಮುಂದಕ್ಕೆ ಕೊಲ್ಲದೇ ಬಿಡುವುದಿಲ್ಲ ಎಂದು ಬೆದರಿಕೆಯೊಡ್ಡಿ ಪರಾರಿಯಾಗಿರುತ್ತಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹಲ್ಲೆಯಿಂದ ಇಬ್ಬರು ಗಂಭೀರ ಗಾಯಗೊಂಡಿದ್ದು, ಹೈದರ್‌ ಸ್ಥಿತಿ ಚಿಂತಾಜನಕವಾಗಿದೆ ಎಂದೆನ್ನಲಾಗಿದೆ. ಮಾಹಿತಿ ಪಡೆದು ಸ್ಥಳಕ್ಕೆ ಧಾವಿಸಿದ ಪೊಲೀಸರು ಕಾರ್ಯಾಚರಣೆ ನಡೆಸಿ, ಬೆಳ್ತಂಗಡಿ ಠಾಣಾ ಪೊಲೀಸರು ಕೃತ್ಯ ನಡೆದ ಎರಡು ಗಂಟೆಯ ಒಳಗಡೆ ಗೇರುಕಟ್ಟೆ ಜನತಾ ಕಾಲೋನಿಯ ಬಳಿ ಆರೋಪಿಗಳನ್ನು ಬಂಧಿಸಿದ್ದಾರೆ.

Also Read  ಉಗ್ರರ ಪರ ಗೋಡೆ ಬರಹ ಪ್ರಕರಣ ➤ ಆರೋಪಿ ಪರ ವಕಾಲತ್ತು ವಹಿಸದಂತೆ ರಾಮ್ ಸೇನಾ ಆಗ್ರಹ

 

 

error: Content is protected !!
Scroll to Top