ಅಕ್ರಮ ಗೋಸಾಗಾಟ ತಡೆದ ಬಜರಂಗದಳ ➤ ವಾಹನ ಸಹಿತ ಓರ್ವನ ವಶಕ್ಕೆ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ನ. 24. ಅಕ್ರಮ ಗೋ ಸಾಗಾಟವನ್ನು ತಡೆದ ಬಜರಂಗದಳ ಕಾರ್ಯಕರ್ತರು ಆರೋಪಿಯನ್ನು ವಾಹನ ಸಹಿತ ಪೋಲಿಸರಿಗೆ ಒಪ್ಪಿಸಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.


ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ಕುರುಡ್ಯದಿಂದ ಕಸಾಯಿಖಾನೆಗೆ ಮಧ್ಯರಾತ್ರಿ ಪಿಕ್ ಅಪ್ ಒಂದರಲ್ಲಿ ಅಕ್ರಮ ಗೋಸಾಗಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ಬಜರಂಗದಳ ಕಾರ್ಯಕರ್ತರು ಅಕ್ರಮ ಗೋ ಸಾಗಾಟವನ್ನು ತಡೆದು ಬಳಿಕ ಒಬ್ಬನನ್ನು ಬಂಧಿಸಿ, ಪಿಕ್ ಅಪ್ ಮತ್ತು ಮಾರುತಿ 800 ವಾಹನವನ್ನು ವಶಪಡಿಸಿದ್ದಾರೆ. ಅಲ್ಲದೇ ದಾಳಿ ಸಂದರ್ಭ ಇಬ್ಬರು ಆರೋಪಿಗಳು ಕತ್ತಲಲ್ಲೇ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದೆ.

error: Content is protected !!

Join the Group

Join WhatsApp Group