ಕಡಬ: ಹಾಡು ಹಗಲೇ ಮನೆಯಂಗಳದಲ್ಲಿ ಕಾಡಾನೆ ಪ್ರತ್ಯಕ್ಷ..! ➤ ಆತಂಕದಲ್ಲಿ ಜನತೆ

(ನ್ಯೂಸ್ ಕಡಬ) newskadaba.com
ಕಡಬ, ನ. 21. ಹಾಡುಹಗಲೇ ಕಾಡಾನೆ ಹಿಂಡೊಂದು ಮನೆ ಅಂಗಳ ಹಾಗೂ ತೋಟಕ್ಕೆ ಲಗ್ಗೆಯಿಟ್ಟು ಜನರನ್ನು ಭಯಬೀತಿ ಗೊಳಿಸುತ್ತಿರುವ ಘಟನೆ ಕಡಬ ತಾಲೂಕಿನ ಕಡ್ಯ ಕೊಣಾಜೆ ವ್ಯಾಪ್ತಿಯಲ್ಲಿ ಸಂಭವಿಸಿದೆ.


ಸುಬ್ರಹ್ಮಣ್ಯ ವಲಯ ಅರಣ್ಯ ವ್ಯಾಪ್ತಿಯ ಕೊಣಾಜೆ ಕಡ್ಯ ಪ್ರದೇಶದಲ್ಲಿ ಕಾಡಾನೆ ರಾತ್ರಿ ಹಾಗೂ ಹಾಡು ಹಗಲಲ್ಲೂ ತೋಟಕ್ಕೆ ನುಗ್ಗಿ ಕೃಷಿ ನಾಶ ಪಡಿಸುತ್ತಿರುವ ದೂರು ಕೇಳಿಬಂದಿದೆ. ಹಲವರ ತೋಟಕ್ಕೆ ಲಗ್ಗೆ ಇಟ್ಟಿರುವ ಕಾಡಾನೆ ನೂರಾರು ಅಡಿಕೆ ಗಿಡ, ಬಾಳೆ ಸೇರಿದಂತೆ ಇತರೆ ಕೃಷಿಗಳನ್ನು ನಾಶ ಪಡಿಸಿದೆ. ಕಾಡಾನೆ ದಾಳಿಯಿಂದ ಜನತೆ ಭಯಭೀತರಾಗಿದ್ದು, ಹಗಲಲ್ಲೂ ಮನೆಯಿಂದ ಹೊರಬರಲು ಭಯಪಡುವ ಸ್ಥಿತಿ ನಿರ್ಮಾಣವಾಗಿದ್ದು, ಅರಣ್ಯ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Also Read  ➤ಪ್ರವಾಸಿ ಮಂದಿರದಲ್ಲಿ PWD ಅಧಿಕಾರಿ ಆತ್ಮಹತ್ಯೆ!

error: Content is protected !!
Scroll to Top