ಆಡುಗಳ್ಳರ ಬೇಟೆಗೆ ಹೋದ ಪೊಲೀಸ್ ಅಧಿಕಾರಿಯನ್ನೇ ಹತ್ಯೆಗೈದ ಕಳ್ಳರ ಗ್ಯಾಂಗ್..!

(ನ್ಯೂಸ್ ಕಡಬ) newskadaba.com ತಿರುಚ್ಚಿ, ನ. 21. ಆಡುಗಳ್ಳರನ್ನು ಹಿಡಿಯಲು ಹೋದ ಸಬ್ ಇನ್ಸ್ ಪೆಕ್ಟರ್ ಓರ್ವನನ್ನು ಕತ್ತಿಯಿಂದ ಕಡಿದು ಬರ್ಬರವಾಗಿ ಹತ್ಯೆಗೈದ ಘಟನೆ ತಮಿಳುನಾಡಿನ ಪುದುಕೊಟ್ಟೈ ಜಿಲ್ಲೆಯ ಗಡಿಭಾಗದ ಕಲಮಾವೂರು ಎಂಬಲ್ಲಿ ನಡೆದಿದೆ.

ಹತ್ಯೆಗೊಳಗಾದವರನ್ನು ಎಸ್.ಐ ಭೂಮಿನಾಥನ್ ಎಂದು ಗುರುತಿಸಲಾಗಿದೆ. ತಿರುಚ್ಚಿ ಜಿಲ್ಲೆಯ ಪರಿಸರದಲ್ಲಿ ರಾತ್ರಿ ವೇಳೆ ಆಡುಗಳನ್ನು ನಿರಂತರವಾಗಿ ಕಳ್ಳತನ ಮಾಡಲಾಗುತ್ತಿದೆ ಎಂಬುವುದಾಗಿ ದೂರು ಕೇಳಿಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಎಸ್ ಐ ಭೂಮಿನಾಥನ್ ಅವರ ನೇತೃತದಲ್ಲಿ ಪೊಲೀಸರು ವಿಶೇಷ ತಂಡದೊಂದಿಗೆ ಪಹರೆ ನಡೆಸುತ್ತಿದ್ದರು. ಶನಿವಾರದಂದು ಬೆಳಗ್ಗಿನ ಜಾವ ಆಟೋವೊಂದರಲ್ಲಿ ಆಡುಗಳನ್ನು ಕಳ್ಳತನ ಮಾಡಲಾಗುತ್ತಿದೆ ಎಂದು ಮಾಹಿತಿಯೊಂದು ಲಭಿಸಿದ ಹಿನ್ನೆಲೆ ಭೂಮಿನಾಥನ್ ಅವರು ತಮ್ಮ ದ್ವಿಚಕ್ರ ವಾಹನದಲ್ಲಿ ತೆರಳಿದ್ದು, ಪುದುಕೊಟ್ಟೈ ಜಿಲ್ಲೆಯ ಗಡಿಭಾಗದ ಕಲಮಾವೂರು ಬಳಿಯ ಕಣಿವೆಯ ಮೂಕಾಂಬಿಕಾ ಕಾಲೇಜಿನ ಬಳಿ ತಲುಪುತ್ತಿದ್ದಂತೆಯೇ ಆಟೋವನ್ನು ದುಷ್ಕರ್ಮಿಗಳು ಅಡ್ಡಗಟ್ಟಿದ್ದಾರೆ. ಇವರನ್ನು ನೋಡುತ್ತಿದ್ದಂತೆಯೇ ಕಳ್ಳರ ಗುಂಪು ಸ್ಥಳದಿಂದ ತಪ್ಪಿಸಿಕೊಳ್ಳಲು ಪೊಲೀಸ್ ಅಧಿಕಾರಿಯ ಮೇಲೆಯೇ ಕತ್ತಿಯಿಂದ ದಾಳಿ ನಡೆಸಿದ್ದು, ಪರಿಣಾಮ ಗಂಭೀರ ಗಾಯಗೊಂಡ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

Also Read  ಲಂಚ ಪ್ರಕರಣದಲ್ಲಿ ಪಂಜಾಬ್ ಎಎಪಿ ಶಾಸಕ ಅಮಿತ್ ರತ್ತನ್ ಕೋಟ್ಫಟ್ಟಾ ಬಂಧನ

 

error: Content is protected !!
Scroll to Top