ಕಡಬ ಸಿಇಒ ಅವರಿಂದ ಕೊಂಬಾರು ಬಸ್ ನಿಲ್ದಾಣದಲ್ಲಿರುವ ಪುಸ್ತಕದ ಗೂಡಿಗೆ ಚಾಲನೆ

(ನ್ಯೂಸ್ ಕಡಬ) newskadaba.com ಮಂಗಳೂರು, ನ.19. ವಿನೂತನ ಯೋಜನೆಯಾಗಿರುವ ಬಸ್ಸು ನಿಲ್ದಾಣದಲ್ಲಿಯೇ ಪುಸ್ತಕ ಅಥವಾ ದಿನ ಪತ್ರಿಕೆಗಳನ್ನು ಓದುವ ಪುಸ್ತಕದ ಗೂಡಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಅವರು ಗುರುವಾರದಂದು ಕಡಬ ತಾಲೂಕಿನ ಕೊಂಬಾರು ಬಸ್ ನಿಲ್ದಾಣದಲ್ಲಿ ಚಾಲನೆ ನೀಡಿದರು.


ಈ ವಿನೂತನ ಯೋಜನೆಯಲ್ಲಿ ಗ್ರಾಮ ಪಂಚಾಯತ್ ವತಿಯಿಂದ ಅಲ್ಲಿನ ಬಸ್ ನಿಲ್ದಾಣಗಳಲ್ಲಿ ದೈನಂದಿನ ದಿನಪತ್ರಿಕೆಗಳು ಹಾಗೂ ಓದುಗರಿಗೆ ಅನುಕೂಲವಾಗುವ ಕೆಲವು ಉಪಯುಕ್ತ ಪುಸ್ತಕಗಳನ್ನು ಪುಸ್ತಕದ ಗೂಡಿನಲ್ಲಿ ಇರಿಸಲಾಗುವುದು. ಬಸ್ ನಿಲ್ದಾಣಕ್ಕೆ ಬರುವ ಆಸಕ್ತ ಓದುಗರು ಬಸ್‍ಗಳಿಗಾಗಿ ಕಾಯುವ ಅವಧಿಯಲ್ಲಿ  ಪುಸ್ತಕಗಳು ಅಥವಾ ದಿನಪತ್ರಿಕೆಗಳನ್ನು ಓದಿ, ಬಸ್ ಹತ್ತುವಾಗ ಪುನಃ ಅವುಗಳನ್ನು ಗೂಡಿನಲ್ಲಿ ಇರಿಸಬೇಕು, ಅದಕ್ಕೆಂದೇ ಗಾಜಿನ ಗೂಡೊಂದನ್ನು ಮಾಡಲಾಗಿದೆ. ಪಾರದರ್ಶಕ ಗೂಡಿನಲ್ಲಿ ಇಡಲಾದ ಪುಸ್ತಕಗಳು ಹಾಗೂ ಪತ್ರಿಕೆಗಳು ಸುಲಭವಾಗಿ ಓದುಗರಿಗೆ ಗೋಚರವಾಗುತ್ತವೆ. ಈ ಸಂದರ್ಭದಲ್ಲಿ ಕಡಬ ತಾಲೂಕು ಪಂಚಾಯತ್‍ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀನಿವಾಸ ನಾಯಕ್ ಇಂದಾಜೆ, ಹಿರಿಯ ಪತ್ರಕರ್ತರಾದ ಭಾಸ್ಕರ್ ರೈ, ಪುಷ್ಪರಾಜ್, ಕಡಬ ತಾಲೂಕಿನ ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ್, ಸ್ಥಳೀಯ ಗ್ರಾ.ಪಂ. ಅಧ್ಯಕ್ಷರು ಹಾಗೂ ಇತರೆ ಗಣ್ಯರು ಉಪಸ್ಥಿತರಿದ್ದರು.

Also Read  ಕಡಬ: ವಿದ್ಯಾರ್ಥಿ ಸಂಘ ಉದ್ಘಾಟನೆ ಮತ್ತು ಪ್ರಮಾಣವಚನ ಸ್ವೀಕಾರ

error: Content is protected !!
Scroll to Top