ಸುಳ್ಯ: ದಿನಸಿ ಅಂಗಡಿಯಲ್ಲಿ ಅಕ್ರಮ ಮದ್ಯ ದಾಸ್ತಾನು ➤ 13 ಸಾವಿರ ರೂ. ಮೌಲ್ಯದ ಮದ್ಯ ವಶಕ್ಕೆ

(ನ್ಯೂಸ್ ಕಡಬ) newskadaba.com ಸುಳ್ಯ, ನ. 10. ದಿನಸಿ ಅಂಗಡಿಗೆ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು ಅಂಗಡಿಯ ಶೆಡ್ ನಲ್ಲಿ ಅಕ್ರಮವಾಗಿ ದಾಸ್ತಾನಿರಿಸಿದ್ದ ಮದ್ಯವನ್ನು ವಶಕ್ಕೆ ಪಡೆದ ಘಟನೆ ತಾಲೂಕಿನ ಅಲೆಟ್ಟಿ ಗ್ರಾಮದ ಬಡ್ಡಡ್ಕ ಎಂಬಲ್ಲ ನಡೆದಿದೆ.

ಅಲೆಟ್ಟಿ ಗ್ರಾಮದ ಬಡ್ಡಡ್ಕದ ಭುವನೇಶ್ವರ ಎಂಬವರಿಗೆ ಸೇರಿದ ಅಂಗಡಿಯೊಂದರಲ್ಲಿ ಮದ್ಯ ಪತ್ತೆಯಾಗಿದ್ದು, ಅಬಕಾರಿ ಪೊಲೀಸರು ದಾಳಿ ಮಾಡಿ ತಪಾಸಣೆ ನಡೆಸಿದಾಗ ನಾಲ್ಕು ಪೆಟ್ಟಿಗೆಗಳಲ್ಲಿ ಮೈಸೂರು ಲೆನ್ಸರ್ ವಿಸ್ಕಿ ಒಟ್ಟು 42 ಪ್ಯಾಕೆಟ್, ವರ್ಜಿನಲ್ ಚಾಯ್ಸ್ ವಿಸ್ಕಿ 48 ಟೆಟ್ರಾ ಪ್ಯಾಕೆಟ್ ಪತ್ತೆಯಾಗಿದೆ. ಇದರ ಒಟ್ಟು ಮೌಲ್ಯ ಸುಮಾರು 13 ಸಾವಿರ ಎಂದು ಅಂದಾಜಿಸಲಾಗಿದೆ. ಕಾರ್ಯಾಚರಣೆ ವೇಳೆ ಆರೋಪಿ ಪರಾರಿಯಾಗಿದ್ದು, ಪುತ್ತೂರು ಅಬಕಾರಿ ಉಪ ಅಧೀಕ್ಷಕ ಶಿವಪ್ರಸಾದ್ ಅವರ ನಿರ್ದೇಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ.

Also Read  ಪುತ್ತೂರು :ಕಾರು ಹಾಗೂ ಓಮ್ನಿ ನಡುವೆ ಅಪಘಾತ

error: Content is protected !!
Scroll to Top