ಎಸ್ಸಿ & ಎಸ್ಟಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು ನ.09. ಪರಿಶಿಷ್ಟ ಜಾತಿ ಹಾಗೂ ಪಂಗಡದ ವಿದ್ಯಾರ್ಥಿಗಳಿಗೆ 2021-22ನೇ ಸಾಲಿನ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ವಿಧಾನ ಇಂತಿದೆ: ಅರ್ಹ ವಿದ್ಯಾರ್ಥಿಗಳು ವೆಬ್ ಸೈಟ್ ವಿಳಾಸ: http://www.sw.kar.nic.in ನಲ್ಲಿ POST METRIC SCHOLARSHIP 2021-22 (E- ATTESTATION PORTAL) ನಲ್ಲಿಅರ್ಜಿ ಸಲ್ಲಿಸಬೇಕು. ನವೀಕರಣ ವಿದ್ಯಾರ್ಥಿಗಳು ವಿದ್ಯಾರ್ಥಿ ಲಾಗಿನ್ (STUDENT LOGIN) ನಲ್ಲಿ ಹಳೆಯ ನೋಂದಣಿ ಸಂಖ್ಯೆ ಹಾಗೂ ಪಾಸ್‌ ವರ್ಡ್ ಬಳಸಿಕೊಂಡು ಅರ್ಜಿ ಸಲ್ಲಿಸಬೇಕು. ವಿದ್ಯಾರ್ಥಿ/ಪೋಷಕರ ಆಧಾರ್ ಸಂಖ್ಯೆ, ಕಾಲೇಜು ಮತ್ತು ಕೋರ್ಸಿನ ವಿವರ, ವಿದ್ಯಾರ್ಥಿ/ಪೋಷಕರ ಮೊಬೈಲ್ ಸಂಖ್ಯೆ, ಜಾತಿ/ಆದಾಯ ಪತ್ರದ ಆರ್.ಡಿ ಸಂಖ್ಯೆ ಪ್ರತಿ, ವಿದ್ಯಾರ್ಥಿಗಳ ಎಸ್.ಟಿ, ಎಸ್‍.ಸಿ ಗುರುತಿನ ಸಂಖ್ಯೆ/ ಕಾಲೇಜು ನೋಂದಣಿ ಸಂಖ್ಯೆ, ವಿದ್ಯಾರ್ಥಿಯ ಇ-ಮೇಲ್‍ ಐಡಿ, ಕರ್ನಾಟಕ ರಾಜ್ಯದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಶುಲ್ಕ ರಶೀದಿಯನ್ನು ಇ-ದೃಢೀಕರಣ ಮಾಡಿಸುವ ಅಗತ್ಯವಿರುವುದಿಲ್ಲ.

Also Read  ಬೈಕ್ ಗಳ ನಡುವೆ ಭೀಕರ ಅಪಘಾತ ➤ ಇಬ್ಬರು ಮೃತ್ಯು, ಓರ್ವ ಗಂಭೀರ

ಅರ್ಹತೆಗಳು: ವಿದ್ಯಾರ್ಥಿಯ ಪೋಷಕರ ಕುಟುಂಬದ ಆದಾಯ ಮಿತಿ ವಾರ್ಷಿಕ 2.50 ಲಕ್ಷ ರೂ.ಗಳು. ವಿದ್ಯಾರ್ಥಿಯು ಮುಂದಿನ ತರಗತಿಗೆ ಪ್ರವೇಶ ಪಡೆಯಲು ಅರ್ಹತೆ ಹೊಂದಿರಬೇಕು. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ:0824-2423619 ಹಾಗೂ 0824-2441269 ಸಂಪರ್ಕಿಸುವಂತೆ ಮಂಗಳೂರು ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಉಪ್ಪಿನಂಗಡಿ ಠಾಣಾ ಎಸ್ಐ ಡಿ.ಎನ್.ಈರಯ್ಯ ವರ್ಗಾವಣೆ ➤ ರಾಜಕೀಯ ಒತ್ತಡಕ್ಕೆ ಬಲಿಯಾದರೇ ಖಡಕ್ ಅಧಿಕಾರಿ..⁉️

error: Content is protected !!
Scroll to Top