ಶ್ರೀದೇವಿ ಇನ್‌ಸ್ಟಿಟ್ಯೂಟ್ ಆಫ್ ಟಕ್ನಾಲಜಿಯಲ್ಲಿ ಪಿಜಿಸಿಇಟಿ ತರಬೇತಿ ಕಾರ್ಯಾಗಾರ

(ನ್ಯೂಸ್ ಕಡಬ) newskadaba.com ಮಂಗಳೂರು, ನ. 09. ಶ್ರೀದೇವಿ ಇನ್ಸಿಟಿಟ್ಯೂಟ್‍ ಆಫ್‍ ಟೆಕ್ನಾಲಜಿಯ ಎಂ.ಬಿ.ಎ ವಿಭಾಗದ ವತಿಯಿಂದ ಸೋಮವಾರದಂದು ಪದವಿ ವಿದ್ಯಾರ್ಥಿಗಳಿಗೆ ಒಂದು ದಿನದ ಪಿಜಿಸಿಇಟಿ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವಿವಿಧ ಪ್ರದೇಶದ ಸುಮಾರು 60ಕ್ಕೂ ಹೆಚ್ಚು ಎಂ.ಬಿ.ಎ. ಆಕಾಂಕ್ಷಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವಿದ್ಯಾರ್ಥಿಗಳಿಗೆ ಪಿಜಿಸಿಇಟಿ ಪಠ್ಯಕ್ರಮದ ಭಾಗವಾಗಿರುವ ಇಂಗ್ಲೀಷ್, ಸಾಮಾನ್ಯ ಜ್ಞಾನ, ಲಾಜಿಕಲ್‍ ರೀಸನಿಂಗ್ ಮತ್ತು ಕ್ವಾಂಟಿಟೇಟಿವ್ ಅನಾಲಿಸಿಸ್ ಮುಂತಾದ ವಿಷಯಗಳ ಬಗ್ಗೆ ಅರಿವು ಮೂಡಿಸಲಾಯಿತು. ಎಂ.ಬಿ.ಎ ವಿಭಾಗದ ಅಧ್ಯಾಪಕರುಗಳು ಮುಖ್ಯ ತರಬೇತುದಾರರಾಗಿದ್ದರು. ತರಬೇತಿ ಕಾರ್ಯಕ್ರಮವನ್ನು ಅಣಕು ಪರೀಕ್ಷೆಯೊಂದಿಗೆ ಮುಕ್ತಾಯಗೊಳಿಸಲಾಯಿತು ಮತ್ತು ಹೆಚ್ಚು ಅಂಕ ಗಳಿಸಿದವರಿಗೆ ಪ್ರಶಸ್ತಿ ನೀಡಲಾಯಿತು. ಮಂಗಳೂರು ಕಾರ್‍ಸ್ಟ್ರೀಟ್‍ನ ಜಿಫ್‍ಜಿಸಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರಾಜಶೇಖರ್ ಹೆಬ್ಬಾರ್ ಸಿ ರವರು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ತಮ್ಮಉದ್ಘಾಟನಾ ಭಾಷಣದಲ್ಲಿ ಅವರು ಉತ್ತಮ ಶಿಕ್ಷಕರ ಗುಣಗಳು ಮತ್ತು ಶಿಕ್ಷಣ ವ್ಯವಸ್ಥೆಯ ಮೇಲೆ ಕೋವಿಡ್-19 ಪ್ರಭಾವದ ಬಗ್ಗೆ ಒತ್ತಿ ಹೇಳಿದರು. ಅವರು ತಮ್ಮ ಪೋಷಕರ ಕನಸುಗಳನ್ನು ನನಸಾಗಿಸಲು ತರಬೇತಿ ಕಾರ್ಯಾಗಾರದ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಹಾಗೂ ಕಾರ್ಯಕ್ರಮದ ಆಯೋಜನೆಯಲ್ಲಿ ಕಾಲೇಜಿನ ಪ್ರಯತ್ನವನ್ನು ಶ್ಲಾಘಿಸಿದರು. ಶ್ರೀದೇವಿ ಇನ್ಸಿಟಿಟ್ಯೂಟ್‍ ಆಫ್‍ ಟೆಕ್ನಾಲಜಿಯ ನಿರ್ದೇಶಕರು ಹಾಗೂ ಪ್ರಾಂಶುಪಾಲರಾದ ಡಾ.ಕೆ.ಇ.ಪ್ರಕಾಶ್‍ ಅಧ್ಯಕ್ಷತೆ ವಹಿಸಿದ್ದರು. ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮುಖ್ಯ ಅತಿಥಿಗಳಿಗೆ ಧನ್ಯವಾದ ತಿಳಿಸಿದರು ಹಾಗೂ ಅವರ ಸಲಹೆ ಸೂಚನೆಗಳನ್ನು ಪುನರುಚ್ಚರಿಸಿದರು. ಎಂ.ಬಿ.ಎ ವಿಭಾಗದ ಮುಖ್ಯಸ್ಥರಾದ ಡಾ.ಗಾಯತ್ರಿ ಬಾಬು ಅವರು ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದ ಸಂಯೋಜಕಿ ಪ್ರೊ.ಗಾಯತ್ರಿ ಶೆಟ್ಟಿ, ಉಪಸ್ಥಿತರಿದ್ದರು. ಎಂ.ಬಿ.ಎ ವಿದ್ಯಾರ್ಥಿನಿ ಅಮೃತಾ ಕೆ.ವಿ. ಕಾರ್ಯಕ್ರಮ ನಿರೂಪಿಸಿದರು.

Also Read  ಪುತ್ತೂರು: ಅತ್ತೆ ಹಾಗೂ ಅತ್ತಿಗೆಯಿಂದ ವರದಕ್ಷಿಣೆ ಕಿರುಕುಳ, ಹಲ್ಲೆ ಪ್ರಕರಣ ➤ ಮಹಿಳೆ ಆಸ್ಪತ್ರೆಗೆ ದಾಖಲು

error: Content is protected !!
Scroll to Top