ಕತಾರ್ ಇಂಡಿಯನ್ ಸೋಷಿಯಲ್ ಫೋರಂ (QISF), ಕೇಂದ್ರ ಸಮಿತಿ ನೂತನ ಪದಾಧಿಕಾರಿಗಳ ಆಯ್ಕೆ

(ನ್ಯೂಸ್ ಕಡಬ) Newskadaba.com ದೋಹಾ, ನ. 01. ಕತಾರ್ ಇಂಡಿಯನ್ ಸೋಷಿಯಲ್ ಫೋರಮ್ ನ(QISF), ರಾಷ್ಟೀಯ ಪಧಾಧಿಕಾರಿಗಳ ಸಭೆಯಲ್ಲಿ ಮುಂದಿನ ಮೂರು ವರ್ಷದ ಅವಧಿಯ ಕೇಂದ್ರಿಯ ಸಮಿತಿಗೆ, ನೂತನ ಪದಾಧಿಕಾರಿಗಳ ಚುನಾವಣಾ ಪ್ರಕ್ರಿಯೆಯು ನಡೆಯಿತು.

ಕೇಂದ್ರ ಸಮಿತಿಯ ನೂತನ ಅಧ್ಯಕ್ಷರಾಗಿ ಅಯ್ಯೂಬ್ ಉಳ್ಳಾಲ (ಕರ್ನಾಟಕ), ಉಪಾಧ್ಯಕ್ಷರಾಗಿ ಸಲಾಮ್ ಕುನ್ನಮ್ಮಲ್ (ಕೇರಳ), ಪ್ರಧಾನ ಕಾರ್ಯದರ್ಶಿಯಾಗಿ ಸಯೀದ್ ಕೋಮಾಚಿ (ಕೇರಳ) ಚುನಾಯಿತರಾದರು. ಕಾರ್ಯದರ್ಶಿಗಳಾಗಿ ಉಸ್ಮಾನ್ ಮೊಹಮ್ಮದ್ (ತಮಿಳು ನಾಡು) ಮತ್ತು ಒಸಾಮಾ ಅಹಮದ್ (ಕೇರಳ) ಚುನಾಯಿತರಾದರು. ಕೇಂದ್ರ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಶಾಕೀರ್ ಪುಂಜಾಲಕಟ್ಟೆ (ಕರ್ನಾಟಕ), ಮೊಹಮ್ಮದ್ ಅಲಿ (ಕೇರಳ), ಬಷೀರ್ ಅಹಮದ್ (ತಮಿಳುನಾಡು), ವಸೀಮ್ ಅಕ್ರಮ್ (ಬಿಹಾರ್), ಜಮಾಲ್ ಸರ್ವರ್ (ಜಾರ್ಖಂಡ್), ಟಿ. ವಿ. ರಜಾಕ್ (ಕೇರಳ), ಮೊಹಿಯುದ್ದೀನ್ (ತಮಿಳುನಾಡು) ಹಾಗೂ ಫೈಜಾನ್ ಅಹಮದ್ (ಮಹಾರಾಷ್ಟ್ರ) ಚುನಾಯಿತರಾದರು.

Also Read  ಅಜಾನ್- ನಮಾಜ್ ವೇಳೆ ಪ್ರಾರ್ಥನಾ ಕೇಂದ್ರಗಳ ಮೈಕ್ ಬಂದ್ ಮಾಡುವಂತೆ ಬಾಂಗ್ಲಾ ಸರ್ಕಾರ ಆದೇಶ

ಚುನಾವಣಾ ಪ್ರಕ್ರಿಯೆಯನ್ನು ಚುನಾವಣಾಧಿಕಾರಿ ಅಬ್ಬಾಸ್ ರವರು ಫೈಝಲ್ ಎಂಬವರ ಸಹಯೋಗದೊಂದಿಗೆ ನೆರವೇರಿಸಿದರು. ಅಧ್ಯಕ್ಷರಾಗಿ ಚುನಾಯಿತರಾದ ಅಯ್ಯೂಬ್ ಉಳ್ಳಾಲ ಮಾತನಾಡಿ, ನೂತನ ಪದಾಧಿಕಾರಿಗಳು ತಮ್ಮ ಸಮಯವನ್ನು ಸಮಾಜ ಸೇವೆಗಾಗಿ ಮೀಸಲಿಟ್ಟು, ನಿಷ್ಪಕ್ಷಪಾತವಾಗಿ ಕೆಲಸ ಮಾಡಲು ಮುಂದಾಗಬೇಕೆಂದು ಕರೆ ನೀಡಿದರು. 2021-2024 ರ ಸಾಲಿಗೆ ಚುನಾಯಿತಗೊಂಡ, ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ರಾಜ್ಯ ಪದಾಧಿಕಾರಿಗಳು ಹಾಗೂ ಈಗ ನಿರ್ಗಮಿಸಲಿರುವ ಕೇಂದ್ರ ಸಮಿತಿಯ ಪದಾಧಿಕಾರಿಗಳು ಸಹ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಉಸ್ಮಾನ್ ಮೊಹಮ್ಮದ್ ಕಾರ್ಯಕ್ರಮವನ್ನು ನಿರೂಪಿಸಿದರು.

Also Read  ವಿಮಾನ ಅಪಘಾತ ➤ ನಾಲ್ವರು ಫುಟ್ ಬಾಲ್ ಆಟಗಾರರು ಮೃತ್ಯು

error: Content is protected !!
Scroll to Top