“ಅನ್ಯಾಯ ದಲಿತರಿಗೆ ಆಗಲಿ, ಸಾಮಾನ್ಯರಿಗೆ ಆಗಲಿ ಅದು ಅನ್ಯಾಯವೇ ಸರಿ” ➤ ಕಡಬದಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವ ಅಂಗಾರ

(ನ್ಯೂಸ್ ಕಡಬ) Newskadaba.com ಕಡಬ, ಅ. 27. ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕ ಹಾಗೂ ಉಸ್ತುವಾರಿ ಸಚಿವರೂ ಆಗಿರುವ ಎಸ್.ಅಂಗಾರ ಅವರು ಜಿಲ್ಲೆಯಲ್ಲಿ ನಡೆಯುತ್ತಿರುವ ಅಪ್ರಾಪ್ತ ದಲಿತ ಬಾಲಕಿಯರ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಬಾರಿಗೆ ಒಂದೇ ವಾಕ್ಯದಲ್ಲಿ ಉತ್ತರಿಸಿದ್ದಾರೆ.


ಕಡಬ ತಾಲೂಕಿನ ಪೆರಾಬೆ ಗ್ರಾಮದ ಇಡಾಳ ಶಾಲೆಯ ಕೊಠಡಿ ಉದ್ಘಾಟನೆಗೆ ಬಂದಿದ್ದ ವೇಳೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಇವರು, “ನಾವು ಸರ್ಕಾರದ ಕಡೆಯಿಂದ ಏನೇನು ಕ್ರಮ ಕೈಗೊಳ್ಳಬೇಕೋ ಅದನ್ನು ಕೈಗೊಳ್ಳುತ್ತೇವೆ, ಅದರಲ್ಲಿ ದಲಿತ ಗಿಲಿತ ಎಂಬುದು ಇಲ್ಲ. ಅನ್ಯಾಯ ದಲಿತರಿಗೇ ಆಗಲಿ ಇಲ್ಲ ಸಾಮಾನ್ಯರಿಗೆ ಅಗಲಿ, ಅನ್ಯಾಯ ಅನ್ಯಾಯವೇ ಸರಿ. ಇದರ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ” ಎಂದರು.

Also Read  ಆರ್.ಟಿ.ಸಿ., ಭೂಮಾಪನ, ಭೂ ಪರಿವರ್ತನೆಯಲ್ಲಿ ಸಮಸ್ಯೆಯೇ..? ► ನ.16 ರಂದು ಜಿಲ್ಲಾ ಮಟ್ಟದ ಕಂದಾಯ ಅದಾಲತ್‍ನಲ್ಲಿ ದೊರೆಯಲಿದೆ ಪರಿಹಾರ

error: Content is protected !!
Scroll to Top