ಬಡ್ತಿ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ರಾಜ್ಯ ಸರಕಾರದಿಂದ ಬಿಗ್ ಶಾಕ್ ➤ ಬಡ್ತಿ ಪಡೆಯಲು ಇನ್ಮುಂದೆ ಪರೀಕ್ಷೆ ಕಡ್ಡಾಯ!

(ನ್ಯೂಸ್ ಕಡಬ) Newskadaba.com ಬೆಂಗಳೂರು, ಅ. 27. ಶಾಲಾ ಶಿಕ್ಷಕರಿಗೆ ಬಡ್ತಿ ನೀಡುವ ವಿಚಾರಕ್ಕೆ ಸಂಬಂಧಿಸಿ ರಾಜ್ಯ ಸರಕಾರವು ಶಿಕ್ಷಕರಿಗೆ ಬಿಗ್ ಶಾಕ್‌ ಕೊಟ್ಟಿದೆ. ಇನ್ಮುಂದೆ ಶಿಕ್ಷಕರು ಬಡ್ತಿ ಪಡೆಯಬೇಕಾದರೆ ಕಡ್ಡಾಯವಾಗಿ ಪರೀಕ್ಷೆಯನ್ನು ಎದುರಿಸಬೇಕು ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರು ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿರುವ ಪ್ರಾಥಮಿಕ ಶಾಲಾ ಶಿಕ್ಷಕರು 1 ರಿಂದ 8ನೇ ತರಗತಿವರೆಗೆ ಪಾಠ ಮಾಡಲು ಅವಕಾಶ ಕೇಳುತ್ತಿದ್ದಾರೆ. ನೂತನ ಸಿ&ಆರ್ ನಿಯಮದ ಪ್ರಕಾರ ಶಿಕ್ಷಕರು ಬಡ್ತಿ ಹೊಂದಬೇಕಾದರೆ ಪರೀಕ್ಷೆಯನ್ನು ಎದುರಿಸುವುದು ಕಡ್ಡಾಯವಾಗಿದೆ. ಹೀಗಾಗಿ ಶಿಕ್ಷಕರು ಪರೀಕ್ಷೆಯ ವಿಷಯದಲ್ಲಿ ಸಹಕಾರವನ್ನು ನೀಡಬೇಕು ಎಂದಿದ್ದಾರೆ.

Also Read  ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ  ವೇಳೆ ಲ್ಯಾಪ್‌ಟಾಪ್, ಪಾಸ್‌ಪೋರ್ಟ್ ಇದ್ದ ಬ್ಯಾಗ್ ಕಳವು! ➤ ದೂರು ದಾಖಲು

error: Content is protected !!
Scroll to Top