ಆಸ್ತಿ ವಿಚಾರದಲ್ಲಿ ವಿವಾದ ➤ 5 ಲಕ್ಷ ರೂ. ಸುಪಾರಿ ನೀಡಿ ತಾಯಿಯನ್ನೇ ಕೊಂದ ಪಾಪಿ ಪುತ್ರ

(ನ್ಯೂಸ್ ಕಡಬ) Newskadaba.com ಚಿಕ್ಕಬಳ್ಳಾಪುರ, ಅ. 16. ಇಬ್ಬರು ಸುಪಾರಿ ಕಿಲ್ಲರ್ ಗಳಿಬ್ಬರು ಸೇರಿ ಮಹಿಳೆಯೋರ್ವರನ್ನು ಬರ್ಬರವಾಗಿ ಹತ್ಯೆಗೈದ ಘಟನೆಗೆ ಸಂಬಂಧಿಸಿ ಇಬ್ಬರನ್ನು ಬಂಧಿಸಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.


ಬಂಧಿತರನ್ನು ಆಂಧ್ರಪ್ರದೇಶದ ವಿಜಯವಾಡದ ಮುಖೇಶ್ ಹಾಗೂ ಹರಿ ಎಂದು ಗುರುತಿಸಲಾಗಿದೆ. ಹತ್ಯೆಯಾದವರನ್ನು ನಳಿನಿ(55) ಎಂದು ಗುರುತಿಸಲಾಗಿದೆ. ಮಹಿಳೆಯ ಮನೆಗೆ ನುಗ್ಗಿ ಕತ್ತು ಕುಯ್ದು ಮಹಿಳೆಯನ್ನು ಹತ್ಯೆಗೈದು, ಪರಾರಿಯಾಗುತ್ತಿದ್ದ ಆರೋಪಿಗಳನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಸ್ತಿ ವಿಚಾರದಲ್ಲಿ ಸ್ವತಃ ಮಗನೇ ತಾಯಿಯನ್ನು ಕೊಲೆ ಮಾಡಲು 5 ಲಕ್ಷ ರೂ. ಸುಪಾರಿ ನೀಡಿದ್ದಾನೆ ಎಂದು ಪೊಲೀಸರ ಮುಂದೆ ಆರೋಪಿಗಳು ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಈ ಕುರಿತು ಚಿಕ್ಕಬಳ್ಳಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಎಡಮಂಗಲ : ಗ್ರಾ.ಪಂ. ವ್ಯಾಪ್ತಿಗೆ ಎಣ್ಮೂರು ಗ್ರಾಮ ಅಧಿಕೃತವಾಗಿ ಸೇರ್ಪಡೆ

error: Content is protected !!
Scroll to Top