ಮಂಗಳೂರು: ಸ್ನೇಹಿತನ ಕೊಲೆಯ ಮೂಲಕ ಅಂತ್ಯವಾದ ದಸರಾ ಪಾರ್ಟಿ..!

(ನ್ಯೂಸ್ ಕಡಬ) Newskadaba.com ಮಂಗಳೂರು, ಅ. 16. ಲಾಡ್ಜ್ ವೊಂದರಲ್ಲಿ ಯುವಕನನ್ನು ಸ್ನೇಹಿತರೇ ‌ಇರಿದು ಕೊಲೆ ಮಾಡಿರುವ ಘಟನೆ ಪಂಪ್ ವೆಲ್ ನಲ್ಲಿ ನಡೆದಿದೆ.

ಕೊಲೆಯಾದವರನ್ನು ಧನುಷ್ (20) ಎಂದು ಗುರುತಿಸಲಾಗಿದೆ. ಈತ ಗೆಳೆಯರಾದ ಪ್ರಮೀತ್, ಜೇಸನ್, ಕಾರ್ತಿಕ್, ಧನುಷ್, ದುರ್ಗೇಶ್ ಮತ್ತು ಪ್ರಜ್ವಲ್ ಎಂಬವರ ಜೊತೆ ದಸರಾ ಹಬ್ಬದ ಪ್ರಯುಕ್ತ ಪಂಪವೆಲ್ ನಲ್ಲಿರುವ ಲಾಡ್ಜ್ ಒಂದಕ್ಕೆ ತೆರಳಿದ್ದಾನೆ. ಪಾರ್ಟಿಯ ವೇಳೆ ರಾತ್ರಿ 2 ಗಂಟೆಗೆ ಜೇಸನ್ ಮತ್ತು ಧನುಷ್ ಎಂಬವರ ಮಧ್ಯೆ ಜಗಳವಾಗಿದ್ದು, ಈ ವೇಳೆ ಜೇಸನ್ ಎಂಬಾತ ತನ್ನಲ್ಲಿದ್ದ ಆಯುಧದಿಂದ ಧನುಷ್ ಗೆ ಚುಚ್ಚಿದ್ದಾನೆ ಎನ್ನಲಾಗಿದೆ. ಘಟನೆಯಿಂದ ತೀವ್ರವಾಗಿ ಗಾಯಗೊಂಡ ಧನುಷ್ ನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎನ್ನಲಾಗಿದೆ.

Also Read  ಕಡಬ: ಆಟೋ ರಿಕ್ಷಾ - ಪಿಕಪ್ ವಾಹನದ ನಡುವೆ ಅಪಘಾತ ➤‌ ನಾಲ್ಕು ವರ್ಷದ ಬಾಲಕ ಮೃತ್ಯು

error: Content is protected !!