ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕೋವಿಡ್ ಮಾರ್ಗಸೂಚಿ ಪಾಲಿಸಲು ಆದೇಶ ➤ ನೆಗೆಟಿವ್ ವರದಿ ಇದ್ದಲ್ಲಿ ಮಾತ್ರ ಭಕ್ತರ ಸೇವೆಗೆ ಅವಕಾಶ

(ನ್ಯೂಸ್ ಕಡಬ) Newskadaba.com ಸುಬ್ರಹ್ಮಣ್ಯ, ಅ. 12. ಕಡಬ ತಾಲೂಕಿನ ಪ್ರಸಿದ್ದ ದೇವಾಲಯ ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ದೇವರ ದರ್ಶನ ಹಾಗೂ ಸೇವೆಗಳನ್ನು ನೆರವೇರಿಸಲು ಕೊರೋನಾ ಮಾರ್ಗಸೂಚಿಯವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಆದೇಶಿಸಲಾಗಿದೆ. ಜೊತೆಗೆ ಕೊರೋನಾ ಲಸಿಕೆಯ 2 ಡೋಸ್ ಪಡೆದಿರಬೇಕು, ಅಲ್ಲದೇ 72 ಗಂಟೆಯ ಮುಂಚಿತವಾಗಿ RTPCR ನೆಗೆಟಿವ್ ವರದಿ ಹೊಂದಿದ್ದರೆ ಮಾತ್ರ ಸೇವೆಗೆ ಅವಕಾಶ ಮಾಡಿಕೊಡಲಾಗುವುದು ಎನ್ನಲಾಗಿದೆ.


ದೇವರ ದರ್ಶನ ಹಾಗೂ ಸೇವೆಯ ಸಂದರ್ಭದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ಅಂತರ ಕಾಯ್ದುಕೊಳ್ಳುವ ಸಲುವಾಗಿ ಅಲ್ಲಲ್ಲಿ ಭದ್ರತಾ ಸಿಬಂದಿಗಳನ್ನು ನಿಯೋಜಿಸಲಾಗಿದೆ. ದೇವಾಲಯದಲ್ಲಿ ಪ್ರತಿದಿನ ಸರ್ಪಸಂಸ್ಕಾರ ನೆರವೇರಿಸಲು ಕೇವಲ 100 ಭಕ್ತರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ ಒಂದು ದಿನದಲ್ಲಿ 25 ನಾಗಪ್ರತಿಷ್ಠೆ ಹಾಗೂ 4 ಪಂಚಾಮೃತ ಮಹಾಭಿಷೇಕಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಭಕ್ತರ ಅನುಕೂಲಕ್ಕಾಗಿ ಕುಕ್ಕೇ ಶ್ರೀ ದೇಗುಲದ ರಾಜಗೋಪುರದ ಬಳಿ ಲಸಿಕಾ ಕೇಂದ್ರ ಹಾಗೂ ಆರ್ಟಿಪಿಸಿಆರ್ ಪರೀಕ್ಷಾ ಕೇಂದ್ರವನ್ನು ತೆರೆಯಲಾಗಿದೆ. ದೇಗುಲದ ಎಲ್ಲಾ ಸಿಬಂದಿಗಳು ಎರಡು ಡೋಸ್ ಲಸಿಕೆ ಪಡೆದುಕೊಂಡಿದ್ದು, ಆಗಾಗ ಆರ್ಟಿಪಿಸಿಆರ್ ಪರೀಕ್ಷೆ ಮಾಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ಅವರು ತಿಳಿಸಿದ್ದಾರೆ.

error: Content is protected !!

Join the Group

Join WhatsApp Group