(ನ್ಯೂಸ್ ಕಡಬ) Newskadaba.com ಲಕ್ನೋ, ಅ. 11. ಮದುವೆಯಾಗುವುದಾಗಿ ನಂಬಿಸಿ ಮಹಿಳೆಯೋರ್ವರ ಮೇಲೆ ಅತ್ಯಾಚಾರಗೈದು, ಬಳಿಕ ಒತ್ತಾಯಪೂರ್ವಕವಾಗಿ ಗರ್ಭಪಾತ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ, ಮದ್ರಸಾ ಶಿಕ್ಷಕನೋರ್ವನನ್ನು ಬಂಧಿಸಿದ ಘಟನೆ ಉ.ಪ್ರದೇಶದ ಶೀಶ್ ಗಢ್ ನಲ್ಲಿ ನಡೆದಿದೆ.
ಸಂತ್ರಸ್ತೆ ಮಹಿಳೆಯು ನೀಡಿದ ದೂರಿನ ಪ್ರಕಾರ, ಆಕೆ ನಾಲ್ಕು ವರ್ಷಗಳ ಹಿಂದೆ ಮದರಸಾಕ್ಕೆ ಬಂದಿದ್ದಳು. ಆರೋಪಿಯು ಆಕೆಯೊಂದಿಗೆ ಅಧ್ಯಯನ ಮಾಡುತ್ತಿದ್ದು, ಬಳಿಕ ಆತ ಮದರಸಾದಲ್ಲಿ ಶಿಕ್ಷಕನಾಗಿ ಕೆಲಸ ಆರಂಭಿಸಿದ್ದು, ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಅಲ್ಲದೇ ಪ್ರೀತಿಸಿ ಮದುವೆಯಾಗುದಾಗಿ ಹೇಳಿ ಆರೋಪಿ ಶಿಕ್ಷಕ ಮಹಿಳೆಗೆ ಪದೇ ಪದೇ ಲೈಂಗಿಕ ದೌರ್ಜನ್ಯವೆಸಗಿದ್ದಲ್ಲದೇ ಒತ್ತಾಯದ ಗರ್ಭಪಾತವನ್ನೂ ಮಾಡಿಸಲಾಗಿದೆ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾಳೆ.