► ಬೆಳ್ತಂಗಡಿ: ಕಾಡುಹಂದಿ ದಾಳಿಗೆ ವ್ಯಕ್ತಿ ಬಲಿ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ನ.01. ಕಾಡು ಹಂದಿಯ ದಾಳಿ ನಡೆಸಿದ ಪರಿಣಾಮ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಬೆಳ್ತಂಗಡಿ ತಾಲ್ಲೂಕಿನ ತಣ್ಣೀರುಪಂತ ಗ್ರಾಮದ ಮಡಪ್ಪಾಡಿ‌ ಎಂಬಲ್ಲಿ ಮಂಗಳವಾರದಂದು ನಡೆದಿದೆ.

ಹಂದಿ ದಾಳಿಗೆ ಬಳಿಯಾದವರನ್ನು ಬೆಳ್ತಂಗಡಿ ತಾಲ್ಲೂಕಿನ ತಣ್ಣೀರುಪಂತ ಗ್ರಾಮದ ಮಡಪ್ಪಾಡಿ‌ ನಿವಾಸಿ ಗಂಗಾಧರ(45 ) ಎಂದು ಗುರುತಿಸಲಾಗಿದೆ. ಇವರ ಮನೆ ಸಮೀಪದಲ್ಲಿ ಅರಣ್ಯ ಇಲಾಖೆಗೆ ಸೇರಿದ ರಕ್ಷಿತಾರಣ್ಯವಿದ್ದು, ಈ ಕಾಡಿನಿಂದ ಬಂದ ಕಾಡು ಹಂದಿ ಗಂಗಾಧರ ಅವರ ಮೇಲೆ ದಾಳಿ ನಡೆಸಿದೆ ಎನ್ನಲಾಗಿದೆ. ಸ್ಥಳಕ್ಕೆ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಗಳು, ಹಾಗೂ ಪುಂಜಾಲಕಟ್ಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

error: Content is protected !!
Scroll to Top