ತುಳುನಾಡಿಗರ ಕಾನೂನು ಹೋರಾಟಕ್ಕೆ ಮಣಿದ ಅದಾನಿ ಸಂಸ್ಥೆ ➤ ಮಂಗಳೂರು ವಿಮಾನ ನಿಲ್ದಾಣದ ಹೆಸರು ಮತ್ತೆ ಯಥಾಸ್ಥಿತಿಗೆ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.12. ಮಂಗಳೂರು ವಿಮಾನ ನಿಲ್ದಾಣಕ್ಕೆ ಅದಾನಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಹೆಸರಿಟ್ಟಿದ್ದ ಅದಾನಿ ಸಂಸ್ಥೆಯು, ತುಳುನಾಡಿಗರ ಆಕ್ರೋಶಕ್ಕೆ ಮಣಿದು ಮತ್ತೆ ಇದೀಗ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಮರು ನಾಮಕರಣ ಮಾಡಿದೆ.

ಮಂಗಳೂರು ಸೇರಿದಂತೆ ದೇಶದ ಹಲವು ವಿಮಾನ ನಿಲ್ದಾಣಗಳ ನಿರ್ವಹಣೆಯ ಗುತ್ತಿಗೆಯನ್ನು ವರ್ಷದ ಹಿಂದೆ ವಹಿಸಿಕೊಂಡಿದ್ದ ಅದಾನಿ ಸಂಸ್ಥೆಯು ಅದಾನಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ನಾಮಕರಣಗೊಳಿಸಿತ್ತು. ಈ ಬಗ್ಗೆ ಮಂಗಳೂರಿನ ಸಾಮಾಜಿಕ ಕಾರ್ಯಕರ್ತ ದಿಲ್‌ರಾಜ್‌ ಆಳ್ವ ಅವರು ಮಾಹಿತಿ ಹಕ್ಕು ಕಾಯಿದೆಯಡಿ ಮಾಹಿತಿ ಪಡೆದು ಕಾನೂನು ಹೋರಾಟ ನಡೆಸಿದ ಪರಿಣಾಮ ಇದೀಗ ಅದಾನಿ ಸಂಸ್ಥೆಯು ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಅದಾನಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎಂಬ ಹೆಸರಿನ ಬದಲಾಗಿ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಮರು ನಾಮಕರಣ ಮಾಡಿದೆ. ಈ ಮೂಲಕ ಕೊನೆಗೂ ತುಳುನಾಡಿಗರ ಆಕ್ರೋಶಕ್ಕೆ ಅದಾನಿ ಸಂಸ್ಥೆಯು ಮಂಡಿಯೂರಿದೆ.

 

Also Read  200 ವರ್ಷಗಳ ನಂತರ ಈ 8 ರಾಶಿಯವರು ಶ್ರೀಮಂತರಾಗುತ್ತಾರೆ ಅದೃಷ್ಟದ ಬಾಗಿಲು ತೆರೆಯಲಿದೆ

 

 

error: Content is protected !!
Scroll to Top