(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಸೆ.12. ಕಡವೆಯೊಂದನ್ನು ಬೇಟೆಯಾಡಿದ ವೇಳೆ ದಾಳಿ ನಡೆಸಿದ ಅರಣ್ಯಾಧಿಕಾರಿಗಳು ಪಿಕಪ್ ಹಾಗೂ ಬೃಹತ್ ಕಡವೆಯನ್ನು ವಶಪಡಿಸಿಕೊಂಡಿದ್ದು, ಆರೋಪಿಗಳು ಪರಾರಿಯಾದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಸಮೀಪ ಕಡವೆ ಶಿಕಾರಿ ಮಾಡಿದ ಬಗ್ಗೆ ಖಚಿತ ಮಾಹಿತಿ ಪಡೆದ ಅರಣ್ಯ ಇಲಾಖೆಯ ಅಧಿಕಾರಿಗಳು ಕೊಪ್ಪ ಡಿಎಫ್ಓ ನೀಲೇಶ್ ಅವರ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಈ ವೇಳೆ ಆರೋಪಿಗಳಾದ ದಿನೇಶ್, ಪ್ರಶಾಂತ್, ಪೂರ್ಣೆಶ್, ಸುರೇಶ್, ಸುಗಂದ್ ಪಿಕಪ್ ವಾಹನ ಹಾಗೂ ಕಡವೆಯನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಆರ್’ಎಫ್ಓ ಪ್ರವೀಣ್, ಸಿಬ್ಬಂದಿಗಳಾದ ರಘು, ಪ್ರಕಾಶ್, ಕಿರಣ್ ಹಾಗೂ ದಿವಾಕರ್ ಭಾಗವಹಿಸಿದ್ದರು.