ತನ್ನ ಬಹುಕಾಲದ ಆಸೆಯನ್ನು ನೆರವೇರಿಸಿದ ಚಿನ್ನದ ಹುಡುಗ ➤ ತಂದೆ-ತಾಯಿಗೆ ಸರ್ಪ್ರೈಸ್ ಗಿಫ್ಟ್ ನೀಡಿದ ನೀರಜ್ ಚೋಪ್ರಾ

(ನ್ಯೂಸ್ ಕಡಬ) newskadaba.com ನವದೆಹಲಿ, ಸೆ.11. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಚಿನ್ನದ ಹುಡುಗ ನೀರಜ್‌ ಚೋಪ್ರಾ ತನ್ನ ಬಹುಕಾಲದ ಆಸೆಯೊಂದನ್ನು ಈಡೇರಿಸಿಕೊಂಡಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ನೀರಜ್‌ ಚೋಪ್ರಾ, “ಇಂದು ನನ್ನ ಬಹುದಿನದ ಕನಸು ನನಸಾಗಿದೆ. ನನ್ನ ಹೆತ್ತವರ ಮೊದಲ ವಿಮಾನ ಪ್ರಯಾಣದ ಆಸೆಯನ್ನು ನಾನು ಈಡೇರಿಸಿದ್ದು, ನನಗೆ ಸಂತಸವಾಗಿದೆ” ಎಂದಿದ್ದಾರೆ. ನೀರಜ್ ಚೋಪ್ರಾ ಅವರು ತನ್ನ ತಂದೆ-ತಾಯಿಯನ್ನು ವಿಮಾನ ಪ್ರಯಾಣ ಮಾಡಿಸಬೇಕು ಎಂದು ಕನಸು ಕಂಡಿದ್ದರಂತೆ. ಅದರಂತೆ ನೀರಜ್‌ ಚೋಪ್ರಾ ಅವರು ಶನಿವಾರ ಬೆಳಗ್ಗೆ ಖಾಸಗಿ ಜೆಟ್‌‌ನಲ್ಲಿ ತನ್ನ ತಂದೆ ಸತೀಶ್‌ ಕುಮಾರ್‌ ಹಾಗೂ ತಾಯಿ ಸರೋಜಾ ದೇವಿ ಅವರನ್ನು ವಿಮಾನ ಪ್ರಯಾಣ ಮಾಡಿಸಿದ್ದು, ತಮ್ಮ ಬಹುಕಾಲದ ಆಸೆಯನ್ನು ಈಡೇರಿಸಿದ್ದಾರೆ.

Also Read  ಆಯೋಧ್ಯೆಗೆ ಯೋಗಿ ಭೇಟಿ➤ಶ್ರೀರಾಮಮಂದಿರ ಶಿಲಾನ್ಯಾಸಕ್ಕೆ ಭರದ ಸಿದ್ಧತೆ

 

 

 

error: Content is protected !!
Scroll to Top