ಮರ್ಧಾಳ: ನಿಯಂತ್ರಣ ತಪ್ಪಿ ಕಾರು ಪಲ್ಟಿ ➤ ಓರ್ವನಿಗೆ ಗಾಯ



(ನ್ಯೂಸ್ ಕಡಬ) newskadaba.com ಕಡಬ, ಆ.26. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯ ಚರಂಡಿಗೆ ಬಿದ್ದ ಪರಿಣಾಮ ಚಾಲಕ ಗಾಯಗೊಂಡ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮರ್ಧಾಳ ಸಮೀಪದ ನೀರಾಜೆ ಕ್ರಾಸ್ ಬಳಿ ಬುಧವಾರ ರಾತ್ರಿ ನಡೆದಿದೆ.





ಗಾಯಗೊಂಡ ಚಾಲಕನನ್ನು ಕಡಬ ತಾಲೂಕಿನ 102 ನೆಕ್ಕಿಲಾಡಿ ಗ್ರಾಮದ ಡೆಪ್ಪುಣಿ ನಿವಾಸಿ ಕುಶಾಲಪ್ಪ ಎಂದು ಗುರುತಿಸಲಾಗಿದೆ. ಕಡಬದಿಂದ ಮರ್ಧಾಳ ಕಡೆಗೆ ತೆರಳುತ್ತಿದ್ದ ಕಾರು ರಸ್ತೆಯ ಎಡ ಬದಿಗೆ ಬಿದ್ದಿದೆ. ಘಟನೆಯಲ್ಲಿ ಕುಶಾಲಪ್ಪರ ತಲೆಗೆ ಗಾಯಗಳಾಗಿದ್ದು, ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಸಂಪೂರ್ಣ ಜಖಂಗೊಂಡಿದೆ.






 

 

 

 

error: Content is protected !!
Scroll to Top