ಹಳಿ ದಾಟುತ್ತಿದ್ದ ವೇಳೆ ರೈಲು ಢಿಕ್ಕಿ ➤ ಮಹಿಳೆಯರಿಬ್ಬರ ದುರ್ಮರಣ

(ನ್ಯೂಸ್ ಕಡಬ) newskadaba.com ಮಂಗಳೂರು, ಆ.21. ಬೀಡಿ ಬ್ರ್ಯಾಂಚ್ ಗೆ ತೆರಳುತ್ತಿದ್ದ ವೇಳೆ ರೈಲು ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಹಿಳೆಯರು ಮೃತಪಟ್ಟ ಘಟನೆ ನಗರದ ಜೆಪ್ಪು ಮಹಾಕಾಳಿಪಡ್ಪು ದೇವಸ್ಥಾನದ ಬಳಿ ಶನಿವಾರದಂದು ನಡೆದಿದೆ.

ಮೃತರನ್ನು ಜೆಪ್ಪು ನಿವಾಸಿಗಳಾದ ವಸಂತಿ (50) ಹಾಗೂ ಪ್ರೇಮಾ (48) ಎಂದು ಗುರುತಿಸಲಾಗಿದೆ. ಮಹಾಕಾಳಿಪಡ್ಪು ಎಂಬಲ್ಲಿರುವ ಬೀಡಿ ತೆಗೆದುಕೊಂಡು ತೆರಳುತ್ತಿದ್ದ ವೇಳೆ ರೈಲು ಹಳಿಯನ್ನು ದಾಟುತ್ತಿದ್ದ ಸಂದರ್ಭದಲ್ಲಿ ಕೇರಳ ಕಡೆಯಿಂದ ಮಂಗಳೂರಿಗೆ ಬರುತ್ತಿದ್ದ ರೈಲು ಢಿಕ್ಕಿ ಹೊಡೆದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ರೈಲ್ವೇ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Also Read  ವೃದ್ದೆಯರನ್ನು ಕಟ್ಟಿಹಾಕಿ ಮನೆ ದರೋಡೆ ➤ 2.5 ಲಕ್ಷ ರೂ ನಗದು ಹಾಗೂ 83 ಗ್ರಾಂ. ಚಿನ್ನಾಭರಣ ಕಳವು...!!

 

 

 

 

error: Content is protected !!
Scroll to Top