ಮರ್ಧಾಳ ಗ್ರಾ.ಪಂ. ಮಾಜಿ ಅಧ್ಯಕ್ಷ ಹರೀಶ್ ರೈ ನಡುಮಜಲು ಹೃದಯಾಘಾತದಿಂದ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಅ.16. ಮರ್ಧಾಳ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ‌ ಹರೀಶ್ ರೈ ನಡುಮಜಲು ಹೃದಯಾಘಾತದಿಂದ ಸೋಮವಾರದಂದು ನಿಧನರಾದರು.

ಮರ್ಧಾಳ 102 ನೆಕ್ಕಿಲಾಡಿ ಗ್ರಾಮದ ನಡುಮಜಲು ನಿವಾಸಿಯಾಗಿದ್ದ ಇವರು ಸೋಮವಾರದಂದು ಬೆಳಿಗ್ಗೆ ತನ್ನ ಬೊಲೆರೋ ವಾಹನದಲ್ಲಿ ಕಡಬಕ್ಕೆ ಆಗಮಿಸಿದ್ದು, ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಕ್ಷಣವೇ ಅವರನ್ನು ನೆಲ್ಯಾಡಿಗೆ ಕರೆದೊಯ್ಯಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯುತ್ತಿದ್ದ ಹಾದಿ ಮಧ್ಯೆ ಮೃತಪಟ್ಟಿದ್ದಾರೆ‌ ಎಂದು ತಿಳಿದುಬಂದಿದೆ.

Also Read  ಕಾವೂರಿನಲ್ಲಿ ಕೇರಳ ಮೂಲದ ಉದ್ಯಮಿಯ ಹತ್ಯೆ ಪ್ರಕರಣ ➤ ಇಬ್ಬರು ಆರೋಪಿಗಳ ಬಂಧನ

 

 

 

error: Content is protected !!
Scroll to Top